ಅವರೆಕಾಳು ಉಪ್ಸಾರು
ಬೇಕಾಗುವ ಸಾಮಗ್ರಿಗಳು:
ಎಳೆ ಅವರೆಕಾಳು 1ಪಾವು
ಹಸಿಮೆಣಸಿನಕಾಯಿ 7-8
ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ನೀರು ಹಾಕಿ ಕಾಯಲು ಇಡಿ. ಕುದಿ ಬಂದಮೇಲೆ ಅವರೆಕಾಳು ಮತ್ತು ಹಸಿಮೆಣಸಿನಕಾಯಿ ಹಾಕಿ ಬೇಯಲು ಇಡಿ. ಅರ್ಧ ಬೆಂದ ನಂತರ ಅದಕ್ಕೆ ಉಪ್ಪು ಸೇರಿಸಿ ಹದವಾಗಿ ಬೇಯಿಸಿ ಕೊಳ್ಳಿ. ಇದರಿಂದ ಹಸಿಮೆಣಸಿನಕಾಯಿಯನ್ನು ತೆಗೆದಿಡಿ.
ಖಾರಕ್ಕೆ ಬೇಕಾಗುವ ಸಾಮಗ್ರಿಗಳು:
ಬೇಯಿಸಿದ ಹಸಿಮೆಣಸಿನಕಾಯಿ 7-8
ಜೀರಿಗೆ 1ಚಮಚ
ಕಾಳು ಮೆಣಸು 1/2 ಚಮಚ
ಹುಣಸೆಹಣ್ಣು ಸ್ವಲ್ಪ
ಉಪ್ಪು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಬೆಳ್ಳುಳ್ಳಿ 10 ಎಸಳು
ಮಾಡುವ ವಿಧಾನ:
ಹಸಿಮೆಣಸಿನಕಾಯಿ ಕಾಯಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಜೀರಿಗೆ, ಮೆಣಸು, ಉಪ್ಪು, ಸ್ವಲ್ಪ ಹುಣಸೆ ಹಣ್ಣು ಮತ್ತು ಬೇಯಿಸಿದ ಸ್ವಲ್ಪ ಕಾಳು ಸ್ವಲ್ಪ ಸೇರಿಸಿ ರುಬ್ಬಿಕೊಳ್ಳಿ. ಗಟ್ಟಿಯಾಗಿ ಇರಬೇಕು ನೀರು ಬೇಕೆನಿಸಿದರೆ ಕಾಳು ಬೇಯಿಸಿದ ನೀರನ್ನು ಬಳಸಿ.