ವಾಂಗಿಬಾತ್
ಬೇಕಾಗುವ ಸಾಮಗ್ರಿಗಳು:
ಬಿಳಿ ಬದನೇಕಾಯಿ 1/2 ಕೆಜಿ
ಎಣ್ಣೆ 3ಚಮಚ
ಸಾಸಿವೆ 1/2 ಚಮಚ
ಕಡ್ಲೆಬೇಳೆ 1 ಚಮಚ
ಉದ್ದಿನಬೇಳೆ 1 ಚಮಚ
ಕರಿಬೇವು ಸ್ವಲ್ಪ
ಒಣಮೆಣಸಿನ ಕಾಯಿ 3
ಉಪ್ಪು ರುಚಿಗೆ ತಕ್ಕಷ್ಟು
ಹುಣಸೆ ರಸ 2ಚಮಚ
ಅರಿಶಿನ ಸ್ವಲ್ಪ
ಉದುರಾದ ಅನ್ನ 2ಕಪ್
ಪುಡಿಗೆ ಬೇಕಾಗುವ ಸಾಮಗ್ರಿಗಳು:
ಕಡ್ಲೆಬೇಳೆ 1ಚಮಚ
ಉದ್ದಿನಬೇಳೆ 1ಚಮಚ
ಬ್ಯಾಡಗಿ ಮೆಣಸಿನಕಾಯಿ 7-8
ಕೆಂಪು ಮೆಣಸಿನಕಾಯಿ 7-8
ಚಕ್ಕೆ 1″
ಲವಂಗ 2-3
ಏಲಕ್ಕಿ 2
ಮೊರಾಠ ಮೊಗ್ಗು 1
ಧನಿಯ 2ಚಮಚ
ಒಣ ಕೊಬ್ಬರಿ 2ಚಮಚ
ಎಲ್ಲಾ ಸಾಮಗ್ರಿಗಳನ್ನು ಹುರಿದು ಪುಡಿ ಮಾಡಿಕೊಳ್ಳಿ.
ಮಾಡುವ ವಿಧಾನ:
ಬದನೇಕಾಯಿ ಯನ್ನು ಉದ್ದುದ್ದ ಹೆಚ್ಚಿಟ್ಟುಕೊಳ್ಳಿ. ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ ಹಾಕಿ ಸಿಡಿಸಿ ನಂತರ ಕಡ್ಲೆಬೇಳೆ, ಉದ್ದಿನಬೇಳೆ, ಕರಿಬೇವು, ಒಣಮೆಣಸಿನಕಾಯಿ ಮತ್ತು ಬದನೇಕಾಯಿ ಹಾಕಿ ಹುರಿಯಿರಿ. ಈಗ ಉಪ್ಪು, ಅರಿಶಿನ, ಹುಣಸೆ ರಸ ಸೇರಿಸಿ ಬೇಯಿಸಿ ಕೊನೆಯಲ್ಲಿ ವಾಂಗಿಬಾತ್ ಪುಡಿ ಹಾಕಿ ಕೈಯಾಡಿಸಿ. ಕೊನೆಯದಾಗಿ ಉದುರಾದ ಅನ್ನ ಸೇರಿಸಿ ಮಿಕ್ಸ್ ಮಾಡಿ ಕಡಿಮೆ ಉರಿಯಲ್ಲಿ 5 ನಿಮಿಷ ಮುಚ್ಚಿ ಬಿಸಿ ಆಗಲು ಬಿಡಿ.
ಈಗ ಬಿಸಿಯಾದ ವಾಂಗಿಬಾತ್ ರೆಡಿ.