ಮಟನ್ ಬಿರಿಯಾನಿ
ಬೇಕಾಗುವ ಸಾಮಗ್ರಿಗಳು:
ಮಟನ್ 1/2 ಕೆಜಿ
ಅಕ್ಕಿ 1/2 ಕೆಜಿ
ಚಕ್ಕೆ 2″
ಲವಂಗ 4
ಬಿರಿಯಾನಿ ಎಲೆ 3
ಏಲಕ್ಕಿ 2
ಸೋಂಪು 1ಸ್ಪೂನ್
ಅನಾನಸ್ ಹೂ 1
ಪುದೀನ 1 ಕಟ್ಟು
ಉಪ್ಪು
ಅರಿಶಿನ
ಈರುಳ್ಳಿ 3-4
ಬೆಳ್ಳುಳ್ಳಿ 2 ಗಡ್ಡೆ
ಕೊತ್ತಂಬರಿ ಸೊಪ್ಪು
ಟೊಮೆಟೊ 2-3
ಹಸಿಮೆಣಸಿನಕಾಯಿ 15 ರಿಂದ 20
ಶುಂಠಿ 2″
ನೀರು ಅಕ್ಕಿಯ ಎರಡರಷ್ಟು
ಮಾಡುವ ವಿಧಾನ:
ಮಾಂಸವನ್ನು ಉಪ್ಪು ಅರಿಶಿಣ ಸ್ವಲ್ಪ ನೀರು ಸೇರಿಸಿ ಕುಕ್ಕರ್ ನಲ್ಲಿ ಬೇಯಿಸಿ ಕೊಳ್ಳಿ. ಶುಂಠಿ ಬೆಳ್ಳುಳ್ಳಿ ಹಸಿಮೆಣಸಿನಕಾಯಿ ಕೊತ್ತಂಬರಿ ಸೊಪ್ಪು ಪುದೀನ ಎಲ್ಲಾ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಒಲೆಯ ಮೇಲೆ ಕುಕ್ಕರ್ ಇಡಿ. ಇದಕ್ಕೆ ಎಣ್ಣೆ ಅಥವಾ ತುಪ್ಪ ಹಾಕಿ ಬಿಸಿಯಾದ ಮೇಲೆ ಚಕ್ಕೆ ಲವಂಗ ಏಲಕ್ಕಿ ಬಿರಿಯಾನಿ ಎಲೆ ಮತ್ತು ಸೋಂಪು ಹಾಕಿ ಹುರಿಯಿರಿ ಈಗ ಈರುಳ್ಳಿ ಟೊಮೆಟೊ ಮತ್ತು ಪುದೀನ ಹಾಕಿ ಫ್ರೈ ಮಾಡಿ ನಂತರ ಬೇಯಿಸಿದ ಮಾಂಸ ಹಾಕಿ. ನೀರು ಹಾಕಿ ಕುದಿಸಿ ನಂತರ ಅಕ್ಕಿ ಉಪ್ಪು ಹಾಕಿ ಚೆನ್ನಾಗಿ ಬೆರೆಸಿ ಒಂದು ಕೂಗಿಸಿ. ಕುಕ್ಕರ್ ತಣ್ಣಾಗಾದ ಮೇಲೆ ತೆಗೆದು ಕೊತ್ತಂಬರಿ ಸೊಪ್ಪು ಹಾಕಿ ಬಡಿಸಿ.