ಒಣ ಹಣ್ಣುಗಳ ಪಾಯಸ | Dry Fruits Payasa recipe in Kannada

ಒಣ ಹಣ್ಣುಗಳ ಪಾಯಸ

ಬೇಕಾಗುವ ಸಾಮಗ್ರಿಗಳು:
ದ್ರಾಕ್ಷಿ 25 ಗ್ರಾಂ
ಗೋಡಂಬಿ 25 ಗ್ರಾಂ
ಬಾದಾಮಿ 25 ಗ್ರಾಂ
ಹಸಿ ಖರ್ಜೂರ 50 ಗ್ರಾಂ
ಅಂಜೂರ 25 ಗ್ರಾಂ
ಆಕ್ರೊಡು (ವಾಲ್ನಟ್) 25 ಗ್ರಾಂ
ಹಾಲು 2ಕಪ್

ಮಾಡುವ ವಿಧಾನ:
ಖರ್ಜೂರ ಬೀಜಗಳನ್ನು ತೆಗೆದು ನೀರಿನಲ್ಲಿ ನೆನಸಿಡಿ.
ಉಳಿದ ಹಣ್ಣುಗಳನ್ನು ನೀರಿನಲ್ಲಿ ನೆನಸಿಡಿ. ನೆನಸಿದ ಬಾದಾಮಿ ಸಿಪ್ಪೆ ತೆಗೆದಿಡಿ. ನೆನಸಿದ ಎಲ್ಲಾ ಹಣ್ಣುಗಳನ್ನು ನುಣ್ಣಗೆ ರುಬ್ಬಿಕೊಳ್ಳಿ. ಹಾಲು ಸೇರಿಸಿ ಕುದಿಸಿ. ಪಾಯಸ ಗಟ್ಟಿ ಎನಿಸಿದರೆ ಸ್ವಲ್ಪ ಹಾಲು ಸೇರಿಸಿ. ಸಣ್ಣಾದಾಗಿ ಕತ್ತರಿಸಿದ ಒಣಹಣ್ಣುಗಳಿಂದ ಅಲಂಕರಿಸಿ.

ನಾನು ಇದಕ್ಕೆ ಸಕ್ಕರೆ ಬಳಸಿಲ್ಲ.

 

_MG_0432

Leave a comment

This site uses Akismet to reduce spam. Learn how your comment data is processed.

www.bugunmersin.com - www.eskisehirescort.asia