ಮಟನ್ ಸಾರು
ಬೇಕಾಗುವ ಸಾಮಗ್ರಿಗಳು:
ಮಟನ್ 1/2 ಕೆಜಿ
ಈರುಳ್ಳಿ 1
ಬೆಳ್ಳುಳ್ಳಿ 15 ಎಸಳು
ಕೊತ್ತಂಬರಿ ಸೊಪ್ಪು ಸ್ವಲ್ಪ
ಅರಿಶಿನ
ಕಾಳು ಮೆಣಸು 1/2 ಚಮಚ
ತೆಂಗಿನ ತುರಿ 1/2 ಕಪ್
ಚಕ್ಕೆ 1″
ಲವಂಗ 3
ಶುಂಠಿ 1″
ಟೊಮೆಟೊ 1
ಉರುಗಡ್ಲೆ 1ಚಮಚ
ಧನಿಯ ಪುಡಿ 2 ಚಮಚ
ಒಣಮೆಣಸಿನ ಕಾಯಿ ಪುಡಿ 2ಚಮಚ (ಖಾರಕ್ಕೆ ಬೇಕಾಗುವಷ್ಟು)
ಮಾಡುವ ವಿಧಾನ:
ಈರುಳ್ಳಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಅರಿಶಿನ ಮತ್ತು ಕಾಳು ಮೆಣಸು ಸ್ವಲ್ಪ ಇಷ್ಟನ್ನು ನೀರು ಸೇರಿಸಿದೆ ರುಬ್ಬಿಕೊಳ್ಳಿ. ತೆಂಗಿನ ತುರಿ, ಚಕ್ಕೆ, ಲವಂಗ, ಶುಂಠಿ, ಟೊಮೆಟೊ ಸ್ವಲ್ಪ ಉರುಗಡ್ಲೆ ಸೇರಿಸಿ ರುಬ್ಬಿಕೊಳ್ಳಿ. ದನಿಯಾ ಪುಡಿ ಮತ್ತು ಒಣಮೆಣಸಿನ ಕಾಯಿ ಪುಡಿ ನೀರು ಸೇರಿಸಿ ಕಲಸಿ ಇಟ್ಟು ಕೊಳ್ಳಿ.
ಕುಕ್ಕರ್ ಒಲೆ ಮೇಲಿಟ್ಟು ಎಣ್ಣೆ ಸ್ವಲ್ಪ ತುಪ್ಪ ಹಾಕಿ ಬಿಸಿಯಾದ ಮೇಲೆ ಈರುಳ್ಳಿ ರುಬ್ಬಿದ ಮಿಶ್ರಣ ಹಾಕಿ ಹಸಿವಾಸನೆ ಹೋಗುವರೆಗೂ ಹುರಿಯಿರಿ ನಂತರ ಇದಕ್ಕೆ ಮಾಂಸದ ತುಂಡುಗಳು ಸೇರಿಸಿ ನೀರು ಇಂಗುವವರೆಗೂ ಹುರಿಯಿರಿ. ಈಗ ದನಿಯಾ ಪುಡಿ ಮಿಶ್ರಣ ಮತ್ತು ಉಪ್ಪು ನೀರು ಸೇರಿಸಿ ಕುದಿಯಲು ಬಿಡಿ. ನಂತರ ತೆಂಗಿನ ತುರಿ ಮಿಶ್ರಣ ಸೇರಿಸಿ. ನೀರು ಬೇಕಿದ್ದರೆ ಸ್ವಲ್ಪ ಸೇರಿಸಿ ಮುಚ್ಚಲ ಮುಚ್ಚಿ ಒಂದು ಕೂಗಿಸಿ.