ಚಿಕನ್ ಬಿರಿಯಾನಿ ಮತ್ತು ರೆಡ್ ಚಿಲ್ಲಿ ಚಿಕನ್ | Chicken Biryani & Red Chilli Chicken recipe in Kannada

By

ಚಿಕನ್ ಬಿರಿಯಾನಿ

ಬೇಕಾಗುವ ಸಾಮಗ್ರಿಗಳು:
ಚಿಕನ್ 1/2 ಕೆಜಿ
ಅಕ್ಕಿ 1/2 ಕೆಜಿ
ಚಕ್ಕೆ 2″
ಲವಂಗ 4
ಬಿರಿಯಾನಿ ಎಲೆ 3
ಏಲಕ್ಕಿ 2
ಸ್ಪೂನ್ ಸೋಂಪು 1
ಅನಾನಸ್ ಹೂ 2
ಪುದೀನ 1 ಕಟ್ಟು
ಉಪ್ಪು
ಅರಿಶಿನ
ಈರುಳ್ಳಿ 3-4
ಬೆಳ್ಳುಳ್ಳಿ 2 ಗಡ್ಡೆ
ಕೊತ್ತಂಬರಿ ಸೊಪ್ಪು
ಟೊಮೆಟೊ 2-3
ಹಸಿಮೆಣಸಿನಕಾಯಿ 15 ರಿಂದ 20
ಶುಂಠಿ 2″
ನೀರು ಅಕ್ಕಿಯ ಎರಡರಷ್ಟು

ಮಾಡುವ ವಿಧಾನ:
ಶುಂಠಿ ಬೆಳ್ಳುಳ್ಳಿ ಹಸಿಮೆಣಸಿನಕಾಯಿ ಕೊತ್ತಂಬರಿ ಸೊಪ್ಪು ಪುದೀನ ಎಲ್ಲಾ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಒಲೆಯ ಮೇಲೆ ಕುಕ್ಕರ್ ಇಡಿ. ಇದಕ್ಕೆ ಎಣ್ಣೆ ಅಥವಾ ತುಪ್ಪ ಹಾಕಿ ಬಿಸಿಯಾದ ಮೇಲೆ ಚಕ್ಕೆ ಲವಂಗ ಏಲಕ್ಕಿ ಬಿರಿಯಾನಿ ಎಲೆ ಮತ್ತು ಸೋಂಪು ಹಾಕಿ ಹುರಿಯಿರಿ ಈಗ ಈರುಳ್ಳಿ ಟೊಮೆಟೊ ಮತ್ತು ಪುದೀನ ಹಾಕಿ ಫ್ರೈ ಮಾಡಿ ನಂತರ ಚಿಕನ್ ಮತ್ತು ನೀರು ಸೇರಿಸಿ ಬೇಯಲು ಬಿಡಿ. ನಂತರ ಅಕ್ಕಿ ಉಪ್ಪು ಹಾಕಿ ಚೆನ್ನಾಗಿ ಬೆರೆಸಿ ಒಂದು ಕೂಗಿಸಿ. ಕುಕ್ಕರ್ ತಣ್ಣಾಗಾದ ಮೇಲೆ ತೆಗೆದು ಕೊತ್ತಂಬರಿ ಸೊಪ್ಪು ಹಾಕಿ ಬಡಿಸಿ.

ರೆಡ್ ಚಿಲ್ಲಿ ಚಿಕನ್

ಬೇಕಾಗುವ ಸಾಮಗ್ರಿಗಳು:
ಚಿಕನ್ 1/2 ಕೆಜಿ
ಈರುಳ್ಳಿ 1
ಟೊಮೆಟೊ 2
ಹಸಿಮೆಣಸಿನಕಾಯಿ 2-3
ಒಣಮೆಣಸಿನ ಪುಡಿ 2 ಚಮಚ (ಖಾರಕ್ಕೆ ಬೇಕಾಗುವಷ್ಟು)
ಕೊತ್ತಂಬರಿ ಸೊಪ್ಪು
ಉಪ್ಪು
ಅರಿಶಿನ

ಮಾಡುವ ವಿಧಾನ:
ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ ಟೊಮೆಟೊ ಹಸಿಮೆಣಸಿನಕಾಯಿ ಹಾಕಿ ಮೆತ್ತಾಗಾಗುವರೆಗೂ ಬೇಯಿಸಿ. ನಂತರ ಚಿಕನ್ ಉಪ್ಪು ಅರಿಶಿಣ ಸೇರಿಸಿ ಹುರಿಯಿರಿ. 1/2 ಕಪ್ ನೀರು ಸೇರಿಸಿ ಬೇಯಲು ಬಿಡಿ. ಬೆಂದ ನಂತರ ಒಣಮೆಣಸಿನ ಕಾಯಿ ಪುಡಿ ಸೇರಿಸಿ ನೀರು ಇಂಗುವರೆಗೂ ಬೇಯಿಸಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪು ಸೇರಿಸಿ

 

_MG_0512-02-1-01

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz