ಮಶ್ರೂಮ್ ಕರಿ | Mushroom Curry recipe in Kannada and English

By

ಮಶ್ರೂಮ್ ಕರಿ

ಬೇಕಾಗುವ ಸಾಮಗ್ರಿಗಳು:
ಮಶ್ರೂಮ್ 200 ಗ್ರಾಂ
ಈರುಳ್ಳಿ 2
ಟೊಮೆಟೊ 4
ಹಸಿಮೆಣಸಿನಕಾಯಿ 2
ಕೊತ್ತಂಬರಿ ಸೊಪ್ಪು ಹೆಚ್ಚಿದ್ದು 2ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಒಣಮೆಣಸಿನಕಾಯಿ ಪುಡಿ 2ಚಮಚ
ದನಿಯಾ ಪುಡಿ 1ಚಮಚ
ಗರಂ ಮಸಾಲ ಪುಡಿ 1ಚಮಚ
ಎಣ್ಣೆ 3-4 ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್ 1ಚಮಚ
ಅರಿಶಿನ 1/2ಚಮಚ
ತುಪ್ಪ 2ಚಮಚ

ಮಾಡುವ ವಿಧಾನ:
ಮಶ್ರೂಮ್ ಅನ್ನು ತೊಳೆದು ಹೆಚ್ಚಿಡಿ
ಈರುಳ್ಳಿ ಮತ್ತು ಟೊಮೆಟೊ ಬೇರೆ ಬೇರೆಯಾಗಿ ಪೇಸ್ಟ್ ಮಾಡಿಕೊಳ್ಳಿ.
ಹಸಿಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ.
ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ ಪೇಸ್ಟ್ ಹಾಕಿ ಹಸಿವಾಸನೆ ಹೋಗುವರೆಗೂ ಹುರಿಯಿರಿ ನಂತರ ಇದಕ್ಕೆ ಮಶ್ರೂಮ್ ಸೇರಿಸಿ ನೀರು ಹಿಂಗುವವರೆಗೂ ಫ್ರೈ ಮಾಡಿ ಆಮೇಲೆ ಟೊಮೆಟೊ ಪ್ಯೂರಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಿಶಿನ, ಒಣಮೆಣಸಿನಕಾಯಿ ಪುಡಿ, ದನಿಯಾ ಪುಡಿ, ಗರಂ ಮಸಾಲ ಪುಡಿ ಉಪ್ಪು, ಹಸಿಮೆಣಸಿನಕಾಯಿ ಸೇರಿಸಿ ಬೇಯಲು ಬಿಡಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪು ತುಪ್ಪ ಸೇರಿಸಿ ಮಿಕ್ಸ್ ಮಾಡಿದರೆ ರುಚಿಯಾದ ಮಶ್ರೂಮ್ ಕರಿ ಸವಿಯಲು ಸಿದ್ಧ.
ಇದನ್ನು ದೋಸೆ, ರೊಟ್ಟಿ, ಚಪಾತಿ, ಪೂರಿ ಜೊತೆಗೆ ಬಡಿಸಬಹುದು.

Mushroom Curry

Required ingredients:
Mushroom 200 grams
Onion 2
Tomato 4
Green Chiilies 2
Chopped Coriander leaves 2 spoon
Salt as per taste
Coriander powder 1 spoon
Garam masala 1 spoon
Cooking oil 3-4 spoon
Ginger and garlic paste 1 spoon
Turmeric powder 1/2 spoon
Ghee 2 spoons

Method:
Clean and chop the mushrooms .Make a paste of onions and tomato separately . Slice the chillies length wise.
In a pan, add oil and once it is heated, add onion paste and fry it until raw fragrance goes. Add mushrooms and fry it until water dries. Then add tomato paste, turmeric powder, garam masala powder, salt and green chillies and let it to cook. Finally add coriander leaves along with ghee and mix it.
You can pair up it with dosa, roti, chapati and puri.

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz