ಮಾವಿನ ಕಾಯಿ ತೊಕ್ಕು
ಬೇಕಾಗುವ ಸಾಮಗ್ರಿಗಳು:
ಹುಳಿ ಮಾವಿನಕಾಯಿ 4
ಉಪ್ಪು ರುಚಿಗೆ ತಕ್ಕಷ್ಟು
ಮೆಂತ್ಯ 2ಚಮಚ
ಸಾಸಿವೆ 2ಚಮಚ
ಚಿಲ್ಲಿ ಪೌಡರ್ 50 ಗ್ರಾಂ
ಅರಿಶಿನ ಸ್ವಲ್ಪ
ಬೆಳ್ಳುಳ್ಳಿ 2ಗಡ್ಡೆ
ಒಗ್ಗರಣೆಗೆ:
ಎಣ್ಣೆ
ಸಾಸಿವೆ
ಇಂಗು
ಕರಿಬೇವು
ಮಾಡುವ ವಿಧಾನ:
ಮಾವಿನಕಾಯಿ ಯನ್ನು ತೊಳೆದು ಒರೆಸಿ ತುರಿದುಕೊಳ್ಳಿ.
ಮೆಂತ್ಯ ಮತ್ತು ಸಾಸಿವೆ ಉರಿದು ನುಣ್ಣಗೆ ಪುಡಿ ಮಾಡಿಕೊಳ್ಳಿ.
ಬೆಳ್ಳುಳ್ಳಿ ಯನ್ನು ಮಿಕ್ಸಿಗೆ ಹಾಕಿ ತರಿ ತರಿ ಮಾಡಿಕೊಳ್ಳಿ.
ಒಂದು ಪಾತ್ರೆಯಲ್ಲಿ ತುರಿದ ಮಾವಿನಕಾಯಿ, ಉಪ್ಪು, ಅರಿಶಿನ, ಚಿಲ್ಲಿ ಪುಡಿ, ಮೆಂತ್ಯ ಸಾಸಿವೆ ಪುಡಿ ಬೆಳ್ಳುಳ್ಳಿ ಸೇರಿಸಿ ಮಿಕ್ಸ್ ಮಾಡಿದರೆ ರುಚಿಯಾದ ತೊಕ್ಕು ರೆಡಿ. ಇದನ್ನು ಗಾಜಿನ ಬಾಟಲ್ ಅಥವಾ ಜಾಡಿಯಲ್ಲಿ ತುಂಬಿಸಿ ಇಡಿ. ಪ್ರತಿ ದಿನ ಬಳಕೆಗಾಗಿ ಸ್ವಲ್ಪ ತೆಗೆದು ಒಗ್ಗರಣೆ ಮಾಡಿಕೊಳ್ಳಿ.ಮಾವಿನಕಾಯಿ ಹುಳಿ ಜಾಸ್ತಿ ಇದ್ದರೆ ಉಪ್ಪು ಮತ್ತು ಖಾರ ಸ್ವಲ್ಪ ಜಾಸ್ತಿ ಹಾಕಬೇಕು.
ಇದು ದೋಸೆ ಇಡ್ಲಿ ಚಪಾತಿ ರೊಟ್ಟಿ ಯಾವುದಕಾದರೂ ಸರಿ ಜೊತೆಯಾಗುತ್ತೆ. ಬಿಸಿ ಅನ್ನಕ್ಕೆ ಸ್ವಲ್ಪ ತುಪ್ಪ ಮತ್ತು ತೊಕ್ಕು ಕಲಸಿ ತಿಂದರೆ ಮ್ ??