ಫ್ರೂಟ್ಸ್ ಕ್ಯಾಂಡಿ
ಬೇಕಾಗುವ ಸಾಮಗ್ರಿಗಳು:
ಸ್ಟ್ರಾಬೆರಿ ಹಣ್ಣು 250 ಗ್ರಾಂ
ಕಿವಿ ಹಣ್ಣು 3
ಸಕ್ಕರೆ 3ಚಮಚ
ಮಾಡುವ ವಿಧಾನ:
ಸ್ಟ್ರಾಬೆರಿ ಕ್ಯಾಂಡಿ
ಸ್ಟ್ರಾಬೆರಿ ಹಣ್ಣನ್ನು ತೊಳೆದು ಹೆಚ್ಚಿಕೊಳ್ಳಿ. ನಂತರ ಒಂದು ಚಮಚ ಸಕ್ಕರೆ ಸೇರಿಸಿ ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿ ಕ್ಯಾಂಡಿ ಮೊಲ್ಡ್ ಗೆ ಹಾಕಿ ಫ್ರೀಜರ್ ನಲ್ಲಿ ಆರು ಗಂಟೆ ಇಟ್ಟರೆ ತಂಪು ತಂಪಾದ ಸ್ಟ್ರಾಬೆರಿ ಕ್ಯಾಂಡಿ ಸವಿಯಲು ರೆಡಿ.
ಕ್ಯಾಂಡಿ ಮೊಲ್ಡ್ ಇಂದ ತೆಗೆಯುವಾಗ ನಲ್ಲಿಯಲ್ಲಿ ನೀರು ಬಿಟ್ಟು ತೆಗೆಯಿರಿ.
ಕಿವಿ ಕ್ಯಾಂಡಿ
ಕಿವಿ ಹಣ್ಣಿನ ಸಿಪ್ಪೆ ತೆಗೆದು ಹೆಚ್ಚಿಕೊಳ್ಳಿ ನಂತರ ಒಂದು ಚಮಚ ಸಕ್ಕರೆ ಸೇರಿಸಿ ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿ ಕ್ಯಾಂಡಿ ಮೊಲ್ಡ್ ಗೆ ಹಾಕಿ ಫ್ರೀಜರ್ ನಲ್ಲಿ ಆರು ಗಂಟೆ ಇಟ್ಟರೆ ರುಚಿಯಾದ ಕಿವಿ ಹಣ್ಣಿನ ಕ್ಯಾಂಡಿ ಸವಿಯಲು ರೆಡಿ.
ಕ್ಯಾಂಡಿ ಮೊಲ್ಡ್ ಇಂದ ತೆಗೆಯುವಾಗ ನಲ್ಲಿಯಲ್ಲಿ ನೀರು ಬಿಟ್ಟು ತೆಗೆಯಿರಿ.
ನಾನು ನೀರನ್ನು ಬಳಸಿಲ್ಲ, ಅಗತ್ಯ ಇದ್ದರೆ ನೀರು ಹಾಕಿ ಮಿಕ್ಸಿಗೆ ಹಾಕಿ.
ಹಣ್ಣು ಹುಳಿ ಇದ್ದರೆ ಸಕ್ಕರೆ ನೋಡಿ ಹಾಕಿಕೊಳ್ಳಿ.
ಫ್ರಿಡ್ಜ್ ನಲ್ಲಿ ನೀವು ಹೇಗೆ ಸೆಟ್ಟಿಂಗ್ ಮಾಡಿದಿರಿ ನೋಡ್ಕೊಂಡು ಫ್ರೀಜ್ ಮಾಡಿ.
Fruit Popsicle
Ingredients Required:
Strawberry – 250g
Kiwi (fruit) – 250g
Sugar – 3spoons
Method:
Strawberry Popsicle
Wash the strawberry, remove the middle part with a straw, and cut it into small pieces. Then add 1 tablespoon of sugar and grind it to a smooth paste. Then add the mixture into a kulfi mold and keep it in the refrigerator for a minimum of 6 hours. Demould the candy under running water and it’s ready to eat.
Kiwi Popsicle
Wash the kiwi fruit and peel off the skin and cut it into small pieces. Then add 1 tablespoon of sugar and grind it to a smooth paste. Then add the mixture into a kulfi mold and keep it in the refrigerator for a minimum of 6 hours. Demould the candy under running water and it’s ready to eat.
I haven’t used any water, if required add a little water. If it’s sour, you can add extra sugar. See the Refrigerator settings and then freeze it.