ರಾಗಿ ಅಂಬಲಿ
ಬೇಕಾಗುವ ಸಾಮಗ್ರಿಗಳು:
ರಾಗಿಹಿಟ್ಟು 2ಚಮಚ
ನೀರು 1 ಗ್ಲಾಸ್
ಉಪ್ಪು ರುಚಿಗೆ ತಕ್ಕಷ್ಟು
ಈರುಳ್ಳಿ ಹೆಚ್ಚಿದ್ದು 3ಚಮಚ
ಕೊತ್ತಂಬರಿ ಸೊಪ್ಪು ಸ್ವಲ್ಪ
ಹಸಿಮೆಣಸಿನಕಾಯಿ 1
ಮಜ್ಜಿಗೆ 1/2 ಗ್ಲಾಸ್
ಮಾಡುವ ವಿಧಾನ:
ರಾಗಿಹಿಟ್ಟುನ್ನು ಸ್ವಲ್ಪ ನೀರಿನಲ್ಲಿ ಗಂಟಿಲ್ಲಂದಂತೆ ಕಲಸಿ ಇಡಿ.
ಒಂದು ಪಾತ್ರೆಯಲ್ಲಿ ನೀರು ಕುದಿಯಲು ಇಡಿ. ಕುದಿ ಬಂದಮೇಲೆ ನೀರಿನಲ್ಲಿ ಕಲಸಿದ ರಾಗಿಹಿಟ್ಟು ಹಾಕಿ ಕೈ ಬಿಡದಂತೆ ತಿರಿಗಿಸುತ್ತಾ ಇರಿ. ಚೆನ್ನಾಗಿ ಬೆಂದ ಮೇಲೆ ಉಪ್ಪು ಸೇರಿಸಿ ಮಿಕ್ಸ್ ಮಾಡಿ ತಣ್ಣಾಗಾಗಲು ಬಿಡಿ.
ತಣ್ಣಾಗಾದ ಮೇಲೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಮಜ್ಜಿಗೆ ಸೇರಿಸಿ ಮಿಕ್ಸ್ ಮಾಡಿದರೆ ತಂಪಾದ ರಾಗಿ ಅಂಬಲಿ ಸವಿಯಲು ಸಿದ್ಧ.
ಅಂಬಲಿ ಗಟ್ಟಿಯಾದರೆ ಸ್ವಲ್ಪ ಮಜ್ಜಿಗೆ ಸೇರಿಸಿ ಕಲಸಿ.