ದೊಣ್ಣೆ ಮೆಣಸಿನಕಾಯಿ ಮಸಾಲ (ಕ್ಯಾಪ್ಸಿಕಮ್ ಮಸಾಲ)
ಬೇಕಾಗುವ ಸಾಮಗ್ರಿಗಳು:
ದೊಣ್ಣೆ ಮೆಣಸಿನಕಾಯಿ 1/2 ಕೆಜಿ
ಈರುಳ್ಳಿ 2
ಟೊಮೆಟೊ 2
ಹಸಿಮೆಣಸಿನಕಾಯಿ 3
ಶುಂಠಿ ಬೆಳ್ಳುಳ್ಳಿ ಪೇಸ್ಟ್ 1ಚಮಚ
ಮೊಸರು 1ಕಪ್
ತೆಂಗಿನ ತುರಿ 1/4 ಕಪ್
ಗೋಡಂಬಿ 10
ಅರಿಶಿನ ಸ್ವಲ್ಪ
ಕೊತ್ತಂಬರಿ ಸೊಪ್ಪು
ಧನಿಯ ಪುಡಿ 1ಚಮಚ
ಒಣಮೆಣಸಿನಕಾಯಿ ಪುಡಿ 1ಚಮಚ
ಗರಂ ಮಸಾಲ 1ಚಮಚ
ಜೀರಿಗೆ ಪುಡಿ 1/2 ಚಮಚ
ತುಪ್ಪ 2ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ 2ಚಮಚ
ನಿಂಬೆ ರಸ 1ಚಮಚ
ಸಕ್ಕರೆ 1/2 ಚಮಚ
ಮಾಡುವ ವಿಧಾನ:
ಈರುಳ್ಳಿ, ಟೊಮೆಟೊ, ದೊಣ್ಣೆ ಮೆಣಸಿನಕಾಯಿಯನ್ನು ಹೆಚ್ಚಿಕೊಳ್ಳಿ. ಹಸಿಮೆಣಸಿನಕಾಯಿ ಉದ್ದಕ್ಕೆ ಸೀಳಿಕೊಳ್ಳಿ.
ತೆಂಗಿನ ತುರಿ ಮತ್ತು ಗೋಡಂಬಿಯನ್ನು ನುಣ್ಣಗೆ ರುಬ್ಬಿಕೊಳ್ಳಿ.
ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ ಹಾಕಿ ಮೆತ್ತಾಗಾಗುವರೆಗೂ ಹುರಿಯಿರಿ ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಟೊಮೆಟೊ ಮತ್ತು ದೊಣ್ಣೆ ಮೆಣಸಿನಕಾಯಿ ಸೇರಿಸಿ ಮಿಕ್ಸ್ ಮಾಡಿ ಐದು ನಿಮಿಷ ಮುಚ್ಚಿ ಬೇಯಲು ಬಿಡಿ. ನಂತರ ಧನಿಯ ಪುಡಿ,ಒಣಮೆಣಸಿನಕಾಯಿ ಪುಡಿ,ಜೀರಿಗೆ ಪುಡಿ, ಅರಿಶಿನ, ತೆಂಗಿನ ತುರಿ ಗೋಡಂಬಿ ಪೇಸ್ಟ್, ಮೊಸರು, ಉಪ್ಪು ಸೇರಿಸಿ ಕಡಿಮೆ ಉರಿಯಲ್ಲಿ ಎಣ್ಣೆ ಬಿಡುವವರೆಗೂ ಬೇಯಲು ಬಿಡಿ. ಹಸಿಮೆಣಸಿನಕಾಯಿ, ಗರಂ ಮಸಾಲ ಪುಡಿ ಮತ್ತು ಸಕ್ಕರೆ ಸೇರಿಸಿ ಕೈಯಾಡಿಸಿ ಕೊನೆಯದಾಗಿ ತುಪ್ಪ, ನಿಂಬೆ ರಸ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿದರೆ ರುಚಿಯಾದ ದೊಣ್ಣೆ ಮೆಣಸಿನಕಾಯಿ ಮಸಾಲ ರೆಡಿ.
ಇದು ದೋಸೆ, ಚಪಾತಿ, ಅನ್ನದ ಜೊತೆಗೆ ಅದ್ಭುತವಾಗಿರುತ್ತೆ.