ನೀರ್ ದೋಸೆ
ಬೇಕಾಗುವ ಸಾಮಗ್ರಿಗಳು:
ಅಕ್ಕಿ 1ಕಪ್
ತೆಂಗಿನ ತುರಿ 4ಚಮಚ
ಉಪ್ಪು
ನೀರ್ ದೋಸೆ ಹಿಟ್ಟು ಮಾಡುವ ವಿಧಾನ: ಅಕ್ಕಿಯನ್ನು 2 ಘಂಟೆ ನೆನಸಿ ನಂತರ ತೆಂಗಿನತುರಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನೀರು ಸೇರಿಸಿ ಮಿಕ್ಸ್ ಮಾಡಿ ಇಡಿ.
ಟೊಮೆಟೊ ನೀರ್ ದೋಸೆ
ಬೇಕಾಗುವ ಸಾಮಗ್ರಿಗಳು:
ಅಕ್ಕಿ 1ಕಪ್
ಟೊಮೆಟೊ 2
ತೆಂಗಿನ ತುರಿ 4ಚಮಚ
ಉಪ್ಪು
ನೀರ್ ದೋಸೆ ಹಿಟ್ಟು ಮಾಡುವ ವಿಧಾನ: ಅಕ್ಕಿಯನ್ನು 2ಘಂಟೆ ನೆನಸಿ ನಂತರ ಟೊಮೆಟೊ ಮತ್ತು ತೆಂಗಿನ ತುರಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನೀರು ಸೇರಿಸಿ ಮಿಕ್ಸ್ ಮಾಡಿ ಇಡಿ.
ಪುದೀನ ನೀರ್ ದೋಸೆ
ಬೇಕಾಗುವ ಸಾಮಗ್ರಿಗಳು:
ಅಕ್ಕಿ 1 ಕಪ್
ತೆಂಗಿನ ತುರಿ 4ಚಮಚ
ಹಸಿಮೆಣಸಿನಕಾಯಿ 3
ಪುದೀನ 2ಹಿಡಿ
ಕೊತ್ತಂಬರಿ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ಪುದೀನ ನೀರ್ ದೋಸೆ ಮಾಡುವ ವಿಧಾನ: ಅಕ್ಕಿಯನ್ನು 2ಘಂಟೆ ನೆನಸಿ ನಂತರ ತೆಂಗಿನತುರಿ, ಪುದೀನ, ಕೊತ್ತಂಬರಿ ಸೊಪ್ಪು ಮತ್ತು ಹಸಿಮೆಣಸಿನಕಾಯಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನೀರು ಸೇರಿಸಿ ಮಿಕ್ಸ್ ಮಾಡಿ ಇಡಿ.
ನೀರ್ ದೋಸೆ ಮಾಡುವ ವಿಧಾನ:
ಕಾದ ತವಾ ಎಣ್ಣೆ ಸವರಿ ನೀರ್ ದೋಸೆ ಹಿಟ್ಟನ್ನು ಸೌಟಿನಿಂದ ಹಾಕಿ ಮುಚ್ಚಲ ಮುಚ್ಚಿ ಬೇಯಿಸಿ. ಇದನ್ನು ಒಂದೇ ಬದಿ ಬೇಯಿಸೊದು. ನಾನ್ ಸ್ಟಿಕ್ ತವಾ ಉಪಯೋಗಿಸಿಕೊಂಡು ಮಾಡಿದ್ದೇನೆ. ದೋಸೆ ಹಿಟ್ಟಿನಷ್ಟು ಹಿಟ್ಟು ಗಟ್ಟಿಯಾಗಿ ಇರಬಾರದು. ಹೆಸರೆ ಹೇಳುವಂತೆ ಹಿಟ್ಟು ನೀರಾಗಿ ಇರಬೇಕು. ತವಾ ಮೇಲೆ ಸೌಟಿನಿಂದ ಹಿಟ್ಟು ಹರಡುವಂತೆ ಹಾಕಬೇಕು.