ಚಿಕನ್ ಕರ್ರಿ
ಬೇಕಾಗುವ ಸಾಮಗ್ರಿಗಳು:
ಚಿಕನ್ 1/2 ಕೆಜಿ
ಟೊಮೆಟೊ 3
ಈರುಳ್ಳಿ 2
ಶುಂಠಿ ಬೆಳ್ಳುಳ್ಳಿ ಪೇಸ್ಟ್ 1ಚಮಚ
ಎಣ್ಣೆ 2ಚಮಚ
ಅರಿಶಿನ ಸ್ವಲ್ಪ
ಒಣಮೆಣಸಿನ ಪುಡಿ 2ಚಮಚ
ಗರಂ ಮಸಾಲ ಪುಡಿ 1ಚಮಚ
ಧನಿಯ ಪುಡಿ 1ಚಮಚ
ಕಾಳು ಮೆಣಸಿನ ಪುಡಿ 1/2 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು ಸ್ವಲ್ಪ
ಮಾಡುವ ವಿಧಾನ:
ಈರುಳ್ಳಿ ಮತ್ತು ಟೊಮೆಟೊ ವನ್ನು ಬೇರೆ ಬೇರೆಯಾಗಿ ಪೇಸ್ಟ್ ಮಾಡಿಕೊಳ್ಳಿ. ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ ಪೇಸ್ಟ್ ಹಾಕಿ ಹುರಿದು ಕೋಳಿ ತುಂಡುಗಳನ್ನು ಹಾಕಿ ಫ್ರೈ ಮಾಡಿ. ನಂತರ ಅರಿಶಿನ ಮತ್ತು ಉಪ್ಪು ಸೇರಿಸಿ ಬೇಯಲು ಬಿಡಿ. ಅರ್ಧ ಬೆಂದ ಮೇಲೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಟೊಮೆಟೊ ಪೇಸ್ಟ್ ಹಾಕಿ ಹಸಿವಾಸನೆ ಹೋಗುವರೆಗೂ ಹುರಿಯಿರಿ ನಂತರ ಒಣಮೆಣಸಿನ ಪುಡಿ ಧನಿಯ ಪುಡಿ ಗರಂ ಮಸಾಲ ಪುಡಿ ಮತ್ತು ಕಾಳು ಮೆಣಸಿನ ಪುಡಿ ಸೇರಿಸಿ ಕೈಯಾಡಿಸಿ ಸ್ವಲ್ಪ ನೀರು ಸೇರಿಸಿ ಎಣ್ಣೆ ಬಿಡುವವರೆಗೂ ಬೇಯಿಸಿ ಕೊನೆಯದಾಗಿ ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿದರೆ ರುಚಿಯಾದ ಚಿಕನ್ ಕರ್ರಿ ರೆಡಿ.
ಇದು ಅನ್ನ, ಚಪಾತಿ, ದೋಸೆ ಯಾವುದಕಾದರೂ ಸರಿ ಜೊತೆಯಾಗುತ್ತೆ.