ಹಸಿ ಅವರೆಕಾಳು ಸಾರು
ಬೇಕಾಗುವ ಸಾಮಗ್ರಿಗಳು:
ಅವರೆಕಾಳು 1ಕಪ್
ಆಲೂಗಡ್ಡೆ 2
ಗುಂಡು ಬದನೆ 1
ಈರುಳ್ಳಿ 2
ಬೆಳ್ಳುಳ್ಳಿ 1ಗಡ್ಡೆ
ಟೊಮೆಟೊ 2
ಹುಣಸೆಹಣ್ಣಿನ ರಸ 2ಚಮಚ
ಸಾರಿನ ಪುಡಿ 2ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ 1ಚಮಚ
ಕರಿಬೇವು ಸ್ವಲ್ಪ
ಒಣಮೆಣಸಿನ ಕಾಯಿ 2
ತೆಂಗಿನ ತುರಿ 3ಚಮಚ
ಕೊತ್ತಂಬರಿ ಸೊಪ್ಪು ಸ್ವಲ್ಪ
ಮಾಡುವ ವಿಧಾನ:
ಒಂದು ಈರುಳ್ಳಿ ಆಲೂಗಡ್ಡೆ ಮತ್ತು ಬದನೆಕಾಯಿ ಯನ್ನು ಹೆಚ್ಚಿಕೊಳ್ಳಿ. ಈರುಳ್ಳಿ ಬೆಳ್ಳುಳ್ಳಿ ಟೊಮೆಟೊ ತೆಂಗಿನ ತುರಿ ಸಾರಿನ ಪುಡಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ರುಬ್ಬಿಕೊಳ್ಳಿ.
ಒಂದು ಪಾತ್ರೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ ಜಜ್ಜಿದ ಬೆಳ್ಳುಳ್ಳಿ ಕರಿಬೇವು ಒಣಮೆಣಸಿನ ಕಾಯಿ ಹಾಕಿ ಹುರಿಯಿರಿ .ನಂತರ ಅವರೆಕಾಳು ಆಲೂಗಡ್ಡೆ ಹಾಕಿ ಹುರಿದು ರುಬ್ಬಿದ ತೆಂಗಿನ ಮಿಶ್ರಣ ನೀರು ಸೇರಿಸಿ ಕುದಿಯಲು ಬಿಡಿ. ಕುದಿ ಬಂದಮೇಲೆ ಬದನೇಕಾಯಿ ಮತ್ತು ಉಪ್ಪು ಸೇರಿಸಿ ಹಸಿವಾಸನೆ ಹೋಗುವರೆಗೂ ಕುದಿಸಿ ಕೊನೆಯಲ್ಲಿ ಹುಣಸೆ ರಸ ಸೇರಿಸಿದರೆ ರುಚಿಯಾದ ಅವರೆಕಾಳು ಸಾರು ರೆಡಿ.