ಉದ್ದಿನ ವಡೆ / ಮೆದು ವಡೆ
ಬೇಕಾಗುವ ಸಾಮಗ್ರಿಗಳು:
ಉದ್ದಿನಬೇಳೆ 1 ಗ್ಲಾಸ್
ಹಸಿಮೆಣಸಿನಕಾಯಿ 4
ಶುಂಠಿ ಸ್ವಲ್ಪ
ಕಾಳು ಮೆಣಸಿನ ಪುಡಿ 1ಚಮಚ
ಕೊತ್ತಂಬರಿ ಸೊಪ್ಪು ಸ್ವಲ್ಪ
ತೆಂಗಿನ ಕಾಯಿ ಸ್ವಲ್ಪ
ಕರಿಬೇವು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ ಕರಿಯಲು
ಮಾಡುವ ವಿಧಾನ:
ಉದ್ದಿನಬೇಳೆ ಯನ್ನು 3-4 ಗಂಟೆ ನೆನಸಿ ನಂತರ ನೀರು ಬಸಿದು ಶುಂಠಿ ಸೇರಿಸಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ತೆಂಗಿನ ಕಾಯಿ, ಹಸಿಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿಕೊಳ್ಳಿ. ನಂತರ ರುಬ್ಬಿದ ಹಿಟ್ಟಿಗೆ ಉಪ್ಪು, ಕಾಳು ಮೆಣಸಿನ ಪುಡಿ ಮತ್ತು ಹೆಚ್ಚಿದನ್ನು ಹಾಕಿ ಚೆನ್ನಾಗಿ ಬೆರೆಸಿ. ನಂತರ ಕಾದ ಎಣ್ಣೆಯಲ್ಲಿ ವಡೆ ತಟ್ಟಿ ಕೆಂಪಗೆ ಕರಿಯಿರಿ.