ಹುರಿದ ಅವರೆಕಾಳು ಸಾರು
ಬೇಕಾಗುವ ಸಾಮಗ್ರಿಗಳು:
ತೊಗರಿಬೇಳೆ 1ಕಪ್
ಒಣ ಅವರೆಕಾಳು 1/2 ಕಪ್
ಆಲೂಗಡ್ಡೆ 2
ಗುಂಡು ಬದನೆ 2
ಟೊಮೆಟೊ 2
ಸಾರಿನ ಪುಡಿ 2ಚಮಚ
ಹುಣಸೆ ರಸ 2ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ:
ಎಣ್ಣೆ 1ಚಮಚ
ಸಾಸಿವೆ 1/2
ಒಣಮೆಣಸಿನ ಕಾಯಿ 2
ಕರಿಬೇವು ಸ್ವಲ್ಪ
ಬೆಳ್ಳುಳ್ಳಿ 6ಎಸಳು (ಜಜ್ಜಿದ್ದು)
ಮಾಡುವ ವಿಧಾನ:
ಅವರೆಕಾಳು ಹುರಿದು ತೊಗರಿಬೇಳೆ ಜೊತೆಗೆ ಕುಕ್ಕರ್ ನಲ್ಲಿ ಬೇಯಿಸಿ ಕೊಳ್ಳಿ. ಆಲೂಗಡ್ಡೆ ಮತ್ತು ಬದನೆಕಾಯಿ ಗಳನ್ನು ತೊಳೆದು ಹೆಚ್ಚಿಡಿ.
ಒಂದು ಪಾತ್ರೆಯಲ್ಲಿ ಆಲೂಗಡ್ಡೆ ಬೇಯಲು ಇಡಿ. ಅರ್ಧ ಬೆಂದ ನಂತರ ಸಾರಿನ ಪುಡಿಯನ್ನು ನೀರಿನಲ್ಲಿ ಕಲಸಿ ಹಾಕಿ ಕುದಿಯಲು ಬಿಡಿ. ಕುದಿ ಬಂದಮೇಲೆ ಉಪ್ಪು ಬದನೆಕಾಯಿ ಸೇರಿಸಿ. ಕೊನೆಯದಾಗಿ ಬೇಯಿಸಿದ ತೊಗರಿಬೇಳೆ ಮತ್ತು ಹುಣಸೆ ರಸ ಸೇರಿಸಿ ಕುದಿಸಿ. ನಂತರ ಒಗ್ಗರಣೆ ಮಾಡಿದರೆ ರುಚಿಯಾದ ಅವರೆಕಾಳು ಸಾರು ರೆಡಿ.
ತೆಂಗಿನ ಕಾಯಿ ರುಬ್ಬಿ ಹಾಕಬಹುದು.