ಮಜ್ಜಿಗೆ ಮೆಣಸಿನಕಾಯಿ
ಬೇಕಾಗುವ ಸಾಮಗ್ರಿಗಳು:
ಹಸಿಮೆಣಸಿನಕಾಯಿ 1/4ಕೆಜಿ
ಉಪ್ಪು ರುಚಿಗೆ ತಕ್ಕಷ್ಟು
ಗಟ್ಟಿಯಾದ ಮಜ್ಜಿಗೆ 2ಕಪ್
ಜೀರಿಗೆ ಪುಡಿ 2ಚಮಚ
ಇಂಗು ಸ್ವಲ್ಪ
ಮಾಡುವ ವಿಧಾನ:
ಮೆಣಸಿನಕಾಯಿಯನ್ನು ತೊಳೆದು ಮದ್ಯಕ್ಕೆ ಸೀಳಿ ಕೊಳ್ಳಿ. ಮಜ್ಜಿಗೆಗೆ ಉಪ್ಪು, ಜೀರಿಗೆಪುಡಿ ಇಂಗು ಸೇರಿಸಿ ಮಿಕ್ಸ್ ಮಾಡಿ ಇದಕ್ಕೆ ಸೀಳಿದ ಮೆಣಸಿನಕಾಯಿಯನ್ನು ಹಾಕಿ ಒಂದು ದಿನ ನೆನಸಿಡಿ.
ನಂತರ ತೆಗೆದು ಬಿಸಿಲಿನಲ್ಲಿ ಒಣಗಿಸಿ. ಮತ್ತೆ ಅದೆ ಮಜ್ಜಿಗೆ ಯಲ್ಲಿ ನೆನೆಸಿಟ್ಟು ಬೆಳಿಗ್ಗೆ ಮತ್ತೆ ತೆಗೆದು ಒಣಗಿಸಿ. ಇದೆ ರೀತಿ ಮೂರು ದಿನ ತೆಗೆದು ಒಣಗಿಸಿ.
ಮೆಣಸಿನಕಾಯಿ ಹಸಿರು ಬಣ್ಣ ಬದಲಾಗಿ ಬಿಳಿಯಾಗುತ್ತದೆ. ನಂತರ ಇದನ್ನು ಬಿಸಿಲಿನಲ್ಲಿ ಗರಿಗರಿಯಾಗುವರೆಗೂ ಒಣಗಿಸಿ ಗಾಳಿಯಾಡದ ಡಬ್ಬಿ ಯಲ್ಲಿ ಹಾಕಿಡಿ. ಬೇಕಾದಾಗ ತೆಗೆದು ಎಣ್ಣೆ ಯಲ್ಲಿ ಕರಿಯಿರಿ.
ಇದನ್ನು ರೊಟ್ಟಿ ಚಪಾತಿ ಮೊಸರನ್ನ ಜೊತೆಗೆ ತಿನ್ನಬಹುದು.