ಒತ್ತು ಶಾವಿಗೆ, ಮೊಳಕೆ ಬರಿಸಿದ ಹುರುಳಿ ಕಾಳು ಸಾರು ಮತ್ತು ಕಾಯಿ ಹಾಲು | Othu Shavige, Sprouted Beans Sambar & Coconut Milk recipe in Kannada

ಒತ್ತು ಶಾವಿಗೆ

ಬೇಕಾಗುವ ಸಾಮಗ್ರಿಗಳು:
ಅಕ್ಕಿ ಹಿಟ್ಟು 1 ಕಪ್
ನೀರು 1 1/2 ಕಪ್
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ 1 ಚಮಚ

ಮಾಡುವ ವಿಧಾನ:
ನೀರಿಗೆ ಉಪ್ಪು ಎಣ್ಣೆ ಹಾಕಿ ಕುದಿಯಲು ಇಡಿ. ಕುದಿ ಬಂದಮೇಲೆ ಅಕ್ಕಿ ಹಿಟ್ಟು ಸೇರಿಸಿ ಗಂಟಿಲ್ಲಂದಂತೆ ಕಲಸಿ ಸಣ್ಣ ಸಣ್ಣ ಉಂಡೆ ಮಾಡಿಕೊಳ್ಳಿ. ಈ ಉಂಡೆ ಗಳನ್ನು ಹಬೆಯಲ್ಲಿ 10 ನಿಮಿಷ ಬೇಯಿಸಿ. ನಂತರ ಶಾವಿಗೆ ಹೊರಳಿಗೆ ಸ್ವಲ್ಪ ಎಣ್ಣೆ ಸವರಿ ಹಬೆಯಲ್ಲಿ ಬೇಯಿಸಿದ ಉಂಡೆಗಳನ್ನು ಹಾಕಿ ಒತ್ತಬೇಕು.

 

ಕಾಯಿಹಾಲು

ಬೇಕಾಗುವ ಸಾಮಗ್ರಿಗಳು:
ಕಾಯಿತುರಿ 1ಕಪ್
ಬೆಲ್ಲ 3/4 ಕಪ್
ಏಲಕ್ಕಿ ಪುಡಿ 1/2
ಹಾಲು 1ಕಪ್

ಮಾಡುವ ವಿಧಾನ:
ಕಾಯಿತುರಿ ಬೆಲ್ಲ ಏಲಕ್ಕಿ ಪುಡಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಇದಕ್ಕೆ ಹಾಲು ಸೇರಿಸಿ ಕುದಿಸಿದರೆ ಕಾಯಿ ಹಾಲು ರೆಡಿ.

 

ಮೊಳಕೆ ಬರಿಸಿದ ಹುರುಳಿ ಕಾಳು ಸಾರು

ಬೇಕಾಗುವ ಸಾಮಗ್ರಿಗಳು:
ಮೊಳಕೆ ಬರಿಸಿದ ಹುರುಳಿ ಕಾಳು 1ಕಪ್
ಈರುಳ್ಳಿ 1
ಬೆಳ್ಳುಳ್ಳಿ 15 ಎಸಳು
ಕೊತ್ತಂಬರಿ ಸೊಪ್ಪು ಸ್ವಲ್ಪ
ಅರಿಶಿನ
ಕಾಳು ಮೆಣಸು 1/2 ಚಮಚ
ತೆಂಗಿನ ತುರಿ 1/2 ಕಪ್
ಚಕ್ಕೆ 1″
ಲವಂಗ 3
ಶುಂಠಿ 1″
ಟೊಮೆಟೊ 1
ಹುರಿಗಡ್ಲೆ 1ಚಮಚ
ಧನಿಯ ಪುಡಿ 2 ಚಮಚ
ಒಣಮೆಣಸಿನ ಕಾಯಿ ಪುಡಿ 2ಚಮಚ (ಖಾರಕ್ಕೆ ಬೇಕಾಗುವಷ್ಟು)

ಮಾಡುವ ವಿಧಾನ:
ಈರುಳ್ಳಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಅರಿಶಿನ ಮತ್ತು ಕಾಳು ಮೆಣಸು ಸ್ವಲ್ಪ ಇಷ್ಟನ್ನು ನೀರು ಸೇರಿಸಿದೆ ರುಬ್ಬಿಕೊಳ್ಳಿ. ತೆಂಗಿನ ತುರಿ, ಚಕ್ಕೆ, ಲವಂಗ, ಶುಂಠಿ, ಟೊಮೆಟೊ ಸ್ವಲ್ಪ ಹುರಿಗಡ್ಲೆ ಸೇರಿಸಿ ರುಬ್ಬಿಕೊಳ್ಳಿ. ದನಿಯಾ ಪುಡಿ ಮತ್ತು ಒಣಮೆಣಸಿನ ಕಾಯಿ ಪುಡಿ ನೀರು ಸೇರಿಸಿ ಕಲಸಿ ಇಟ್ಟು ಕೊಳ್ಳಿ. ಕುಕ್ಕರ್ ಒಲೆ ಮೇಲಿಟ್ಟು ಎಣ್ಣೆ ಸ್ವಲ್ಪ ತುಪ್ಪ ಹಾಕಿ ಬಿಸಿಯಾದ ಮೇಲೆ ಈರುಳ್ಳಿ ರುಬ್ಬಿದ ಮಿಶ್ರಣ ಹಾಕಿ ಹಸಿವಾಸನೆ ಹೋಗುವರೆಗೂ ಹುರಿಯಿರಿ ನಂತರ ಇದಕ್ಕೆ ಹುರಳಿ ಕಾಳು ಸೇರಿಸಿ ನೀರು ಇಂಗುವವರೆಗೂ ಹುರಿಯಿರಿ. ಈಗ ದನಿಯಾ ಪುಡಿ ಮಿಶ್ರಣ ಮತ್ತು ಉಪ್ಪು ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಯಲು ಬಿಡಿ. ನಂತರ ತೆಂಗಿನ ತುರಿ ಮಿಶ್ರಣ ಸೇರಿಸಿ. ನೀರು ಬೇಕಿದ್ದರೆ ಸ್ವಲ್ಪ ಸೇರಿಸಿ ಮುಚ್ಚಲ ಮುಚ್ಚಿ ಒಂದು ಕೂಗಿಸಿ.

 

IMG_20180706_152756

Leave a comment

This site uses Akismet to reduce spam. Learn how your comment data is processed.

www.bugunmersin.com - www.eskisehirescort.asiawww.bugunmersin.com - www.eskisehirescort.asia