ಗುಂಡು ಬದನೆ ಮತ್ತು ನುಗ್ಗೆಕಾಯಿ ಮಸಾಲ
4 ರಿಂದ 5 ಜನಕ್ಕೆ
ಬೇಕಾಗುವ ಸಾಮಗ್ರಿಗಳು:
ಗುಂಡು ಬದನೆ 3-4
ನುಗ್ಗೆಕಾಯಿ 3
ಈರುಳ್ಳಿ 2
ಬೆಳ್ಳುಳ್ಳಿ 10 – 15 ಎಸಳು
ಕೊತ್ತಂಬರಿ ಸೊಪ್ಪು ಸ್ವಲ್ಪ
ಅರಿಶಿನ ಸ್ವಲ್ಪ
ಶುಂಠಿ 1/2 “
ತೆಂಗಿನ ತುರಿ 1/2 ಕಪ್
ಚಕ್ಕೆ 1/2″
ಲವಂಗ 2_3
ಉರುಗಡ್ಲೆ 1 ಸ್ಪೂನ್
ಧನಿಯ ಪುಡಿ 1 ಸ್ಪೂನ್
ಮೆಣಸಿನಕಾಯಿ ಪುಡಿ 2ಸ್ಪೂನ್ (ಖಾರಕ್ಕೆ ಬೇಕಾಗುವಷ್ಟು)
ಟೊಮೆಟೊ 2
ಉಪ್ಪು
ಎಣ್ಣೆ 3 ಸ್ಪೂನ್
ಮಾಡುವ ವಿಧಾನ:
ನುಗ್ಗೆಕಾಯಿಯನ್ನು 2″ ಉದ್ದ ಕತ್ತರಿಸಿ ನಾರು ತೆಗೆದು ತೊಳೆದಿಡಿ.
ಗುಂಡು ಬದನೇಕಾಯಿ ಯನ್ನು ನಾಲ್ಕು ಭಾಗ ಸೀಳಿ ನೀರಿಗೆ ಹಾಕಿ. (ಎಣ್ಣೆ ಗಾಯಿಗೆ ಕತ್ತರಿಸುವ ಹಾಗೆ).
ಈರುಳ್ಳಿ ಬೆಳ್ಳುಳ್ಳಿ ಕೊತ್ತಂಬರಿ ಸೊಪ್ಪು ಸ್ವಲ್ಪ ಅರಿಶಿಣ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ.
ತೆಂಗಿನ ಕಾಯಿ ತುರಿ ಶುಂಠಿ ಚಕ್ಕೆ ಲವಂಗ ಉರುಗಡ್ಲೆ ಮತ್ತು ಟೊಮೆಟೊ ಸೇರಿಸಿ ಗಟ್ಟಿಯಾಗಿ ರುಬ್ಬಿಕೊಳ್ಳಿ.
ಧನಿಯ ಪುಡಿ ಮತ್ತು ಮೆಣಸಿನ ಕಾಯಿ ಪುಡಿ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ.
ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ ಬೆಳ್ಳುಳ್ಳಿ ಮಿಶ್ರಣ ಹಾಕಿ ಹಸಿವಾಸನೆ ಹೋಗುವರೆಗೂ ಹುರಿಯಿರಿ. ನಂತರ ಗುಂಡು ಬದನೆ ನುಗ್ಗೆ ಕಾಯಿ ಸೇರಿಸಿ ಹುರಿಯಿರಿ. ಈಗ ರುಬ್ಬಿದ ತೆಂಗಿನ ಕಾಯಿ ಮಿಶ್ರಣ ಮತ್ತು ಧನಿಯ ಪುಡಿ ಮಿಶ್ರಣ ಸೇರಿಸಿ. 1 ಕಪ್ ನೀರು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕುದಿಯಲು ಬಿಡಿ. ಮಸಾಲೆ ಹಸಿ ವಾಸನೆ ಹೋಗುವರೆಗೂ ಕುದಿಸಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪು ಸೇರಿಸಿ ಕೈಯಾಡಿಸಿ.
ಇದು ಅನ್ನ, ಚಪಾತಿ, ದೋಸೆ, ರೊಟ್ಟಿಗೆ ಜೊತೆಗೆ ಬಡಿಸಬಹುದು