ಪಾನಿಪೂರಿ
ಬೇಕಾಗುವ ಸಾಮಗ್ರಿಗಳು :
ಪೂರಿ 15
ಸಿಹಿ ಚಟ್ನಿ 2 – 3 ಚಮಚ
ಪುದೀನ/ಖಾರಾ ಚಟ್ನಿ 2 ಚಮಚ
ಚಾಟ್ ಮಸಾಲ 1 ಚಮಚ
ನಿಂಬೆ ರಸ ½ ಚಮಚ
ಒಣ ಬಟಾಣಿ 1ಕಪ್
ಈರುಳ್ಳಿ 2
ಕೊತ್ತಂಬರಿ ಸೊಪ್ಪು ಸ್ವಲ್ಪ
ಜೀರಿಗೆ ಪುಡಿ ½ ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಪಾನಿಪೂರಿ ಮಸಾಲ 1ಚಮಚ
ಮಾಡುವ ವಿಧಾನ:
ಒಣ ಬಟಾಣಿ ಯನ್ನು 5 ಗಂಟೆ ನೆನಸಿ ನಂತರ ರುಚಿಗೆ ತಕ್ಕಷ್ಟು ಉಪ್ಪು ಸ್ವಲ್ಪ ನೀರು ಹಾಕಿ ಕುಕ್ಕರ್ ನಲ್ಲಿ ಮೆತ್ತಗೆ ಬೇಯಿಸಿಡಿ. ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪುನ್ನು ಸಣ್ಣಗೆ ಹೆಚ್ಚಿಕೊಳ್ಳಿ.
ಖಾರಾ ಪಾನಿ ಮಾಡುವ ವಿಧಾನ: ½ ಲೀಟರ್ ನೀರಿಗೆ 2ಚಮಚ ಪುದೀನ ಚಟ್ನಿ, ಚಾಟ್ ಮಸಾಲ, ನಿಂಬೆರಸ, ಪಾನಿಪೂರಿ ಮಸಾಲ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಕ್ಸ್ ಮಾಡಿದರೆ ರುಚಿಯಾದ ಪಾನಿ ರೆಡಿ.
ಸಿಹಿ ಪಾನಿ ಮಾಡುವ ವಿಧಾನ: ½ ಲೀಟರ್ ನೀರಿಗೆ ಸಿಹಿ ಚಟ್ನಿ, ಜೀರಿಗೆ ಪುಡಿ ,ಚಿಟಕಿ ಉಪ್ಪು ಸೇರಿಸಿ ಮಿಕ್ಸ್ ಮಾಡಿದರೆ ರುಚಿಯಾದ ಸಿಹಿ ಪಾನಿ ರೆಡಿ.
ಒಂದು ಪ್ಲೇಟ್ ಗೆ ಮದ್ಯ ರಂಧ್ರ ಮಾಡಿದ ಪೂರಿಗಳನ್ನು ಜೊಡಿಸಿ ಅದಕ್ಕೆ ಬೇಯಿಸಿದ ಬಟಾಣಿ ಹೆಚ್ಚಿದ ಈರುಳ್ಳಿ ಕೊತ್ತಂಬರಿ ಸೊಪ್ಪು ಸ್ವಲ್ಪ ತುಂಬಿಸಿ ಅದನ್ನು ಪಾನಿಯಲ್ಲಿ ಮುಳುಗಿಸಿದರೆ ತಿನ್ನಲು ರುಚಿಯಾದ ಪಾನಿಪೂರಿ ರೆಡಿ.
ಸಿಹಿ ಪಾನಿ ಮಾಡದೆ ಸಿಹಿ ಚಟ್ನಿಯನ್ನು ಹಾಗೆ ಬಳಸಬಹುದು. ಬೇಯಿಸಿದ ಆಲೂಗೆಡ್ಡೆಗೆ ಉಪ್ಪು ಚಿಲ್ಲಿ ಪೌಡರ್ ಚಾಟ್ ಮಸಾಲ ಹಾಕಿ ಮಿಕ್ಸ್ ಮಾಡಿ ಬಟಾಣಿ ಬದಲು ಬಳಸಬಹುದು. ಪುದೀನ/ಖಾರಾ ಚಟ್ನಿ ಅಥವಾ ಸಿಹಿ ಚಟ್ನಿ ನಿಮ್ಮ ರುಚಿಗೆ ಅನುಸಾರ ಸೇರಿಸಿಕೊಳ್ಳಿ. ಕ್ಯಾರೆಟ್ ತುರಿ ಯನ್ನು ಬಳಸಬಹುದು.
ಪೂರಿ ರೆಸಿಪಿಗಾಗಿ ಇಲ್ಲಿ ಕ್ಲಿಕ್ಕಿಸಿ | ಸಿಹಿ ಚಟ್ನಿ ಮತ್ತು ಪುದೀನ/ ಖಾರಾ ಚಟ್ನಿ ರೆಸಿಪಿಗಾಗಿ ಇಲ್ಲಿ ಕ್ಲಿಕ್ಕಿಸಿ
Pani Poori
Required Ingredients:
Poori 15
Sweet Chutney 2-3 spoons
Pudina or Spicy Chutney 2 spoons
Chat Masala 1 spoon
Lemon Juice 1/2 spoon
Dried Peas 1 cup
Onions 2
Coriander Leaves 1/4 cup
Jeera Powder 1/2 spoon
Salt as per taste
Pani Poori masala
Method:
Soak the dried peas and then cook it in the cooker along with salt. Chop the onions and coriander leaves.
Making of Spicy or Pudina Pani: For 1/2 litre water add 2 spoons of pudina / spicy chutney, chat masala, lemon juice, Pani poori masala, salt as per taste, and mix it.
Making of Sweet Pani: For 1/2 litre water add sweet chutney, Jeera powder, chat masala, salt as per taste, and mix it.
In a plate, arrange the poori by crushing it in the middle and fill it by peas, chopped onions, coriander leaves and dip it in pani.
You can use sweet chutney instead of making sweet Pani. You can use boiled and mashed potato along with salt, red chilly powder, and chat masala powder instead of peas. You can add Pudina/spicy and Sweet chutney as per your taste. You can also use grated carrots.
Click here for Poori recipe | Click here for the Mint / Spicy chutney and Sweet chutney recipe
View this post on Instagram