ಮೆಂತ್ಯ ಪರಾಟ
ಬೇಕಾಗುವ ಸಾಮಗ್ರಿಗಳು:
ಚಪಾತಿ ಹಿಟ್ಟು
ಮೆಂತ್ಯ ಸೊಪ್ಪು 1ಕಟ್ಟು
ಈರುಳ್ಳಿ 1
ಜೀರಿಗೆ 1ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಹಸಿಮೆಣಸಿನಕಾಯಿ 3
ಚಿಲ್ಲಿ ಪೌಡರ್ 1/2 ಚಮಚ
ಇಂಗು ಸ್ವಲ್ಪ
ಎಣ್ಣೆ 5-6 ಚಮಚ
ಕೊತ್ತಂಬರಿ ಸೊಪ್ಪು ಸ್ವಲ್ಪ
ಮಾಡುವ ವಿಧಾನ:
ಮೆಂತ್ಯ ಸೊಪ್ಪು, ಕೊತ್ತಂಬರಿ ಸೊಪ್ಪು, ಈರುಳ್ಳಿ, ಹಸಿಮೆಣಸಿನಕಾಯಿ ಯನ್ನು ತೊಳೆದು ಸಣ್ಣಗೆ ಹೆಚ್ಚಿಕೊಳ್ಳಿ.
ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಜೀರಿಗೆ ಹಾಕಿ ಸಿಡಿಸಿ ನಂತರ ಹಸಿಮೆಣಸಿನಕಾಯಿ ಇಂಗು ಮೆಂತ್ಯ ಸೊಪ್ಪು ಉಪ್ಪು ಹಾಕಿ ಬಾಡಿಸಿ ಕೊಳ್ಳಿ. ತಣ್ಣಾಗಾದ ಮೇಲೆ ಹೆಚ್ಚಿದ ಈರುಳ್ಳಿ ಕೊತ್ತಂಬರಿ ಸೊಪ್ಪು ಚಿಲ್ಲಿ ಪೌಡರ್ ಹಾಕಿ ಕಲಸಿದರೆ ಹೂರಣ (ಸ್ಟಫ್) ರೆಡಿ.
ಚಪಾತಿ ಹಿಟ್ಟನ್ನು ಲಟ್ಟಿಸಿ ಮದ್ಯ ಮೆಂತ್ಯ ಸೊಪ್ಪಿನ ಮಿಶ್ರಣ ಇಷ್ಟು ಮಡಚಿ (ಹೋಳಿಗೆ ಮಾಡುವ ರೀತಿ) ನಿಧಾನವಾಗಿ ಲಟ್ಟಿಸಿ ಕಾದ ತವಾ ಎಣ್ಣೆ ಹಾಕಿ ಎರಡು ಕಡೆ ಹದವಾಗಿ ಬೇಯಿಸಿದರೆ ರುಚಿಯಾದ ಮೆಂತ್ಯ ಸೊಪ್ಪಿನ ಪರಾಟ ತಿನ್ನಲು ರೆಡಿ. ಇದನ್ನು ಮೊಸರು ಅಥವಾ ಪುದೀನ ಚಟ್ನಿ ಯ ಜೊತೆ ಬಡಿಸಿ.