ಕಡ್ಲೆಕಾಯಿ ಹಸಿಗೊಜ್ಜು
ಬೇಕಾಗುವ ಸಾಮಗ್ರಿಗಳು:
ಕಡ್ಲೆಕಾಯಿ 1 ಕಪ್
ಒಣಮೆಣಸಿನ ಕಾಯಿ 8
ಜೀರಿಗೆ 1/2 ಚಮಚ
ತೆಂಗಿನ ತುರಿ 1/4 ಕಪ್
ಹುಣಸೆ ಹಣ್ಣು ಸಣ್ಣ ನಿಂಬೆ ಗಾತ್ರ
ಅರಿಶಿನ ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ:
ಎಣ್ಣೆ 1ಚಮಚ
ಸಾಸಿವೆ ಸ್ವಲ್ಪ
ಕರಿಬೇವು ಸ್ವಲ್ಪ
ಒಣಮೆಣಸಿನಕಾಯಿ 2
ಇಂಗು ಸ್ವಲ್ಪ
ಮಾಡುವ ವಿಧಾನ:
ಹುಣಸೆಹಣ್ಣುನ್ನು ನೀರಿನಲ್ಲಿ ನೆನಸಿ ಕಿವುಚಿ ರಸ ತೆಗೆದಿಡಿ.
ಕಡ್ಲೆಕಾಯಿ, ಜೀರಿಗೆ, ಒಣಮೆಣಸಿನಕಾಯಿ ಯನ್ನು ಬೇರೆ ಬೇರೆಯಾಗಿ ಕಡಿಮೆ ಉರಿಯಲ್ಲಿ ಹುರಿದುಕೊಳ್ಳಿ.
ತಣ್ಣಾಗಾದ ನಂತರ ಇದಕ್ಕೆ ಅರಿಶಿನ, ಕೊತ್ತಂಬರಿ ಸೊಪ್ಪು, ಉಪ್ಪು ಮತ್ತು ತೆಂಗಿನ ತುರಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಇದಕ್ಕೆ ಹುಣಸೆ ರಸ ಸೇರಿಸಿ ಮಿಕ್ಸ್ ಮಾಡಿ. ಅಗತ್ಯ ಇದ್ದರೆ ಸ್ವಲ್ಪ ನೀರು ಸೇರಿಸಿ. ಕೊನೆಯದಾಗಿ ಒಗ್ಗರಣೆ ಮಾಡಿ.
ಇದನ್ನು ಕುದಿಸುವ ಆಗಿಲ್ಲ.
ಈ ಹಸಿ ಗೊಜ್ಜು ಚಟ್ನಿಯ ಹದಕ್ಕೆ ಇರಬೇಕು. ತೆಳು ಇರಬಾರದು