ಟೊಮೆಟೊ ಚಿತ್ರಾನ್ನ
ಬೇಕಾಗುವ ಸಾಮಗ್ರಿಗಳು:
ಈರುಳ್ಳಿ 2
ಟೊಮೆಟೊ 3
ಹಸಿಮೆಣಸಿನಕಾಯಿ 10
ಅರಿಶಿನ ಸ್ವಲ್ಪ
ಕರಿಬೇವು ಸ್ವಲ್ಪ
ಕೊತ್ತಂಬರಿ ಸೊಪ್ಪು
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ 4ಚಮಚ
ಕಡ್ಲೆಕಾಯಿ ಬೀಜ 2ಚಮಚ
ಕಡ್ಲೆಬೇಳೆ 1ಚಮಚ
ಮಾಡುವ ವಿಧಾನ:
ಈರುಳ್ಳಿ ಹಸಿಮೆಣಸಿನಕಾಯಿಯನ್ನು ಉದ್ದುದ್ದ ಹೆಚ್ಚಿಕೊಳ್ಳಿ. ಟೊಮೆಟೊ ಮತ್ತು ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಕೊಳ್ಳಿ.
ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ ಹಾಕಿ ಸಿಡಿಸಿ ಈರುಳ್ಳಿ ಕರಿಬೇವು ಹಸಿಮೆಣಸಿನಕಾಯಿ ಹಾಕಿ ಮೆತ್ತಾಗಾಗುವರೆಗೂ ಹುರಿಯಿರಿ ನಂತರ ಟೊಮೆಟೊ, ಉಪ್ಪು, ಅರಿಶಿನ ಸೇರಿಸಿ ಕಡಿಮೆ ಉರಿಯಲ್ಲಿ ಎಣ್ಣೆ ಬಿಡುವವರೆಗೂ ಬೇಯಿಸಿ.
ಕಡ್ಲೆಕಾಯಿ ಬೀಜ ಮತ್ತು ಕಡ್ಲೆಬೇಳೆ ಯನ್ನು ಎಣ್ಣೆ ಯಲ್ಲಿ ಹುರಿದು ಇದಕ್ಕೆ ಸೇರಿಸಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿ ಬಿಸಿ ಅನ್ನಕ್ಕೆ ಕಲಸಿ.