ಆಲೂ ಬಟಾಣಿ ಮಸಾಲ
4 ರಿಂದ 5 ಜನಕ್ಕೆ
ಬೇಕಾಗುವ ಸಾಮಗ್ರಿಗಳು:
ಹಸಿಬಟಾಣಿ 2ಕಪ್
ಆಲೂಗೆಡ್ಡೆ 2
ಈರುಳ್ಳಿ 2
ಬೆಳ್ಳುಳ್ಳಿ 10 – 15 ಎಸಳು
ಕೊತ್ತಂಬರಿ ಸೊಪ್ಪು ಸ್ವಲ್ಪ
ಅರಿಶಿನ ಸ್ವಲ್ಪ
ಶುಂಠಿ 1/2 “
ತೆಂಗಿನ ತುರಿ 1/2 ಕಪ್
ಚಕ್ಕೆ 1/2″
ಲವಂಗ 2_3
ಹುರಿಗಡ್ಲೆ 1ಚಮಚ
ಟೊಮೆಟೊ 2
ಉಪ್ಪು
ಎಣ್ಣೆ 3 ಸ್ಪೂನ್
ಸಾರಿನ ಪುಡಿ 2ಚಮಚ
ಮಾಡುವ ವಿಧಾನ:
ಆಲೂಗೆಡ್ಡೆ ಯನ್ನು ಹೆಚ್ಚಿಕೊಳ್ಳಿ
ಈರುಳ್ಳಿ ಬೆಳ್ಳುಳ್ಳಿ ಕೊತ್ತಂಬರಿ ಸೊಪ್ಪು ಸ್ವಲ್ಪ ಅರಿಶಿಣ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ.
ತೆಂಗಿನ ಕಾಯಿ ತುರಿ ಶುಂಠಿ ಚಕ್ಕೆ ಲವಂಗ ಹುರಿಗಡ್ಲೆ ಸಾರಿನ ಪುಡಿ ಮತ್ತು ಟೊಮೆಟೊ ಸೇರಿಸಿ ಗಟ್ಟಿಯಾಗಿ ರುಬ್ಬಿಕೊಳ್ಳಿ.
ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ ಬೆಳ್ಳುಳ್ಳಿ ಮಿಶ್ರಣ ಹಾಕಿ ಹಸಿವಾಸನೆ ಹೋಗುವರೆಗೂ ಹುರಿಯಿರಿ. ನಂತರ ಬಟಾಣಿ ಮತ್ತು ಆಲೂಗಡ್ಡೆ ಸೇರಿಸಿ ಹುರಿಯಿರಿ. ಈಗ ರುಬ್ಬಿದ ತೆಂಗಿನ ಕಾಯಿ ಮಿಶ್ರಣ ಮತ್ತು 1 ಕಪ್ ನೀರು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕುದಿಯಲು ಬಿಡಿ. ಮಸಾಲೆ ಹಸಿ ವಾಸನೆ ಹೋಗುವರೆಗೂ ಕುದಿಸಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪು ಸೇರಿಸಿ ಕೈಯಾಡಿಸಿ.
ಇದು ಅನ್ನ, ಚಪಾತಿ, ದೋಸೆ, ರೊಟ್ಟಿಗೆ ಜೊತೆಗೆ ಬಡಿಸಬಹುದು.