ಹೆಸರುಕಾಳು ಸಲಾಡ್
ಬೇಕಾಗುವ ಸಾಮಗ್ರಿಗಳು:
ನೆನಸಿದ ಹೆಸರುಕಾಳು 1ಕಪ್
ಸೌತೆಕಾಯಿ ಅರ್ದ
ಈರುಳ್ಳಿ 1
ಟೊಮೆಟೊ 1
ಹಸಿಮೆಣಸಿನಕಾಯಿ 2
ಕೊತ್ತಂಬರಿ ಸೊಪ್ಪು ಸ್ವಲ್ಪ
ತೆಂಗಿನ ತುರಿ 2ಚಮಚ
ಅಮ್ಚೂರ್ ಪುಡಿ 1/2 ಚಮಚ
ಚಾಟ್ ಮಸಾಲ 1/2 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಸೌತೆಕಾಯಿ, ಈರುಳ್ಳಿ, ಟೊಮೆಟೊ, ಹಸಿಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪುನ್ನು ಸಣ್ಣಗೆ ಹೆಚ್ಚಿಕೊಳ್ಳಿ. ನಂತರ ಒಂದು ಬಟ್ಟಲಿಗೆ ನೆನಸಿದ ಹೆಸರುಕಾಳು ಹೆಚ್ಚಿದ ತರಕಾರಿ ಉಪ್ಪು ಚಾಟ್ ಮಸಾಲ ಅಮ್ಚೂರ್ ಪುಡಿ ಮತ್ತು ತೆಂಗಿನ ತುರಿ ಸೇರಿಸಿ ಕಲಸಿದರೆ ಆರೋಗ್ಯಕರವಾದ ಸಲಾಡ್ ರೆಡಿ.
ಹೆಸರುಕಾಳು ಮೊಳಕೆ ಬರಿಸಿ ಕೂಡ ಮಾಡಬಹುದು.
