ಹಿತಕಿದ ಅವರೆಬೇಳೆ ಸಾರು | Hitakida Avarebele Saaru recipe in Kannada

ಹಿತಕಿದ ಅವರೆಬೇಳೆ ಸಾರು

ಬೇಕಾಗುವ ಸಾಮಗ್ರಿಗಳು:
ಹಿತಕಿದ ಅವರೆಬೇಳೆ 1ಪಾವು
ಸಾರಿನ ಪುಡಿ 2ಚಮಚ
ಎಣ್ಣೆ 1ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಈರುಳ್ಳಿ 1
ಬೆಳ್ಳುಳ್ಳಿ 1ಗಡ್ಡೆ
ಅರಿಶಿನ ಸ್ವಲ್ಪ
ತೆಂಗಿನ ತುರಿ 1/2 ಕಪ್
ಚಕ್ಕೆ 1″
ಲವಂಗ 3
ಶುಂಠಿ ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಹುರಿಗಡ್ಲೆ 1ಚಮಚ
ಟೊಮೆಟೊ 2
ಕಾಳು ಮೆಣಸು 1/2 ಚಮಚ

ಮಾಡುವ ವಿಧಾನ:
ಈರುಳ್ಳಿ, ಬೆಳ್ಳುಳ್ಳಿ ಪೇಸ್ಟ್ ಮಾಡಿಕೊಳ್ಳಿ. ಟೊಮೆಟೊ ಮತ್ತು ಸಾರಿನ ಪುಡಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ತೆಂಗಿನ ತುರಿ, ಚಕ್ಕೆ, ಲವಂಗ, ಶುಂಠಿ, ಕೊತ್ತಂಬರಿ ಸೊಪ್ಪು, ಹುರಿಗಡ್ಲೆ, ಕಾಳುಮೆಣಸು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ ಮಿಶ್ರಣ ಹಾಕಿ ಹಸಿವಾಸನೆ ಹೋಗುವರೆಗೂ ಹುರಿಯಿರಿ ನಂತರ ಹಿತಕಿದ ಅವರೆಬೇಳೆ ಸೇರಿಸಿ ಹುರಿಯಿರಿ. ನಂತರ ರುಬ್ಬಿದ ಟೊಮೆಟೊ ಮಿಶ್ರಣ ಮತ್ತು ನೀರು ಸೇರಿಸಿ ಹಸಿವಾಸನೆ ಹೋಗುವರೆಗೂ ಕುದಿಯಲು ಬಿಡಿ. ಈಗ ತೆಂಗಿನ ಕಾಯಿ ಮಿಶ್ರಣ ಮತ್ತು ಉಪ್ಪು ಮತ್ತು ಅಗತ್ಯವಿದ್ದಷ್ಟು ಸೇರಿಸಿ ಕುದಿಸಿದರೆ ರುಚಿಯಾದ ಹಿತಕಿದ ಅವರೆಬೇಳೆ ಸಾರು ರೆಡಿ.

8 Comments

 • S V Chidananda
  Posted December 22, 2018 4:54 pm 0Likes

  Your recipes are so good n presentation also good
  Share ur contact number

 • Avare bele saru is colourful ?
  Posted December 22, 2018 5:12 pm 0Likes

  Super

  • anu.thimmappa
   Posted December 22, 2018 6:13 pm 0Likes

   ಧನ್ಯವಾದಗಳು

  • Devaraj
   Posted December 24, 2018 9:43 am 0Likes

   ಈರುಳ್ಳಿ ಮಿಶ್ರಣ ಟೊಮೆಟೊ ಮಿಶ್ರಣ confusing

   • anu.thimmappa
    Posted December 24, 2018 2:50 pm 0Likes

    ಈರುಳ್ಳಿ ಮತ್ತು ಬೆಳ್ಳುಳ್ಳಿಯ ಪೇಸ್ಟ್ ಗೆ ಈರುಳ್ಳಿ ಮಿಶ್ರಣ
    ಟೊಮೆಟೊ ಮತ್ತು ಸಾರಿನ ಪುಡಿ ರುಬ್ಬಿದಕ್ಕೆ ಟೊಮೆಟೊ ಮಿಶ್ರಣ

 • Geetha
  Posted December 23, 2018 6:38 pm 0Likes

  Hithkavre sarige sarina pudi helidhira,yava sarina pudi endu heli

  • anu.thimmappa
   Posted December 23, 2018 6:39 pm 0Likes

   ಸಾರಿನ ಪುಡಿ, ಸಾಂಬಾರು ಪುಡಿ, ಮೆಣಸಿನ ಪುಡಿ, ಹುಳಿ ಪುಡಿ ಇದರಲ್ಲಿ ನೀವು ಏನಂತೀರಾ?? ನನಗೆ ಗೊತ್ತಿಲ್ಲ ನಾವು ಅಂತು ಸಾರಿನ ಪುಡಿ ಅಂತ ಹೇಳೋದು.

   ನಮ್ಮ ಮನೆ ಸಾರಿನ ಪುಡಿ ಹೇಗಿರುತ್ತದೆ ಅಂತ ತಿಳ್ಕೊಬೇಕಾ?? ಹಾಗಾದರೆ ನೀವು ಟ್ರೈ ಮಾಡಿ

   ಮಾಡುವ ವಿಧಾನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ https://lifeonplates.com/2018/11/23/ಸಾರಿನ-ಪುಡಿ-ಹುಳಿ-ಪುಡಿ-sambar-powder-recipe-in-kannada-english/

  • anu.thimmappa
   Posted December 23, 2018 10:20 pm 0Likes

   ಈಗ ಲಿಂಕ್ ಹಾಕಿದ್ದಿನಿ ಅಲ್ವಾ ಅದೇ ಸಾರಿನ ಪುಡಿ ಹಾಕಿರೊದು.

Leave a comment

This site uses Akismet to reduce spam. Learn how your comment data is processed.

www.bugunmersin.com - www.eskisehirescort.asia