ನುಗ್ಗೆಕಾಯಿ ಸಾರು
ಬೇಕಾಗುವ ಸಾಮಗ್ರಿಗಳು:
ತೊಗರಿಬೇಳೆ 200 ಗ್ರಾಂ
ಟೊಮೆಟೊ 1
ಅರಿಶಿನ ಸ್ವಲ್ಪ
ಸಾರಿನ ಪುಡಿ 2ಚಮಚ
ನುಗ್ಗೆಕಾಯಿ 3
ಆಲೂಗಡ್ಡೆ 2
ಹುಣಸೆರಸ 2ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ:
ಎಣ್ಣೆ 1ಚಮಚ
ಸಾಸಿವೆ 1/4 ಚಮಚ
ಕರಿಬೇವು ಸ್ವಲ್ಪ
ಒಣಮೆಣಸಿನ ಕಾಯಿ
ಮಾಡುವ ವಿಧಾನ:
ತೊಗರಿಬೇಳೆ, ಟೊಮೆಟೊ ಮತ್ತು ಅರಿಶಿನ ಸೇರಿಸಿ ಕುಕ್ಕರ್ ನಲ್ಲಿ ಬೇಯಿಸಿ ಕೊಳ್ಳಿ.
ನುಗ್ಗೆಕಾಯಿ ಮತ್ತು ಆಲೂಗಡ್ಡೆಯನ್ನು ಹೆಚ್ಚಿಕೊಳ್ಳಿ. ಒಂದು ಪಾತ್ರೆಯಲ್ಲಿ ತರಕಾರಿ ಗಳನ್ನು ಬೇಯಲು ಇಡಿ ಅರ್ಧ ಬೆಂದ ತರಕಾರಿಗೆ ಸಾರಿನ ಪುಡಿಯನ್ನು ನೀರಿನಲ್ಲಿ ಕಲಸಿ ಹಾಕಿ. ಹಸಿವಾಸನೆ ಹೋಗುವರೆಗೂ ಕುದಿಸಿ. ಈಗ ಬೇಯಿಸಿದ ತೊಗರಿಬೇಳೆ, ಹುಣಸೆ ರಸ ಮತ್ತು ಉಪ್ಪು ಹಾಕಿ ಕುದಿಸಿ ಕೊನೆಯಲ್ಲಿ ಒಗ್ಗರಣೆ ಮಾಡಿದರೆ ಸಿಂಪಲ್ ಆದ ನುಗ್ಗೆಕಾಯಿ ಸಾರು ರೆಡಿ.
ಇದಕ್ಕೆ ತೆಂಗಿನಕಾಯಿ ರುಬ್ಬಿ ಹಾಕಬಹುದು. ನಾನು ತೆಂಗಿನ ಕಾಯಿ ಹಾಕಿಲ್ಲ