ಮಸಾಲ ಅಕ್ಕಿ ರೊಟ್ಟಿ
ಬೇಕಾಗುವ ಸಾಮಗ್ರಿಗಳು:
ಅಕ್ಕಿ ಹಿಟ್ಟು 2ಕಪ್
ಗೆಡ್ಡೆಕೋಸು ತುರಿದಿದ್ದು 2ಕಪ್
ಜೀರಿಗೆ 1ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಗರಂ ಮಸಾಲ 1ಚಮಚ
ಒಣಮೆಣಸಿನ ಕಾಯಿ ಪುಡಿ 1ಚಮಚ
ಅರಿಶಿನ ಸ್ವಲ್ಪ
ಕರಿಬೇವು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಕಾಯಿತುರಿ 2ಚಮಚ
ಎಳ್ಳು 2ಚಮಚ
ಎಣ್ಣೆ 2-3 ಚಮಚ
ನೀರು
ಮಾಡುವ ವಿಧಾನ:
ಎಣ್ಣೆ ಹಾಗೂ ನೀರನ್ನು ಬಿಟ್ಟು, ಉಳಿದ ಎಲ್ಲಾ ಸಾಮಗ್ರಿಗಳನ್ನು ಒಂದು ಬೌಲನಲ್ಲಿ ಹಾಕಿ ಚೆನ್ನಾಗಿ ಬೆರೆಸಿ, ಈಗ ಸ್ವಲ್ಪ ಸ್ವಲ್ಪ ನೀರು ಸೇರಿಸಿ ಮೃದುವಾಗಿ ಕಲಸಿ ಸಣ್ಣ ಸಣ್ಣ ಉಂಡೆ ಕೊಳ್ಳಿ. ಎಣ್ಣೆ ಸವರಿದ ಬಾಳೆಎಲೆ ಅಥವಾ ಬಟರ್ ಪೇಪರ್ ಮೇಲೆ ತೆಳುವಾಗಿ ತಟ್ಟಿ, ಕಾದ ತವಾ ಮೇಲೆ ಎಣ್ಣೆ ಹಾಕಿ ಬೇಯಿಸಿದರೆ ರುಚಿಯಾದ ಮಸಾಲ ಅಕ್ಕಿ ರೊಟ್ಟಿ ರೆಡಿ.
ಗೆಡ್ಡೆಕೋಸಿನ ಬದಲು ಬೇರೆ ತರಕಾರಿ ಮತ್ತು ಸೊಪ್ಪುನ್ನು ಬಳಸಬಹುದು.
ಇದನ್ನು ತುಪ್ಪ, ಚಟ್ನಿ, ಉಪ್ಪಿನಕಾಯಿ, ತೊಕ್ಕು, ಎಣ್ಣೆಗಾಯಿ ಯಾವುದರ ಜೊತೆಯು ತಿನ್ನಬಹುದು. ಸಿಂಪಲ್ ಆಗಿ ಮೊಸರು ಜೊತೆಗೂ ತಿನ್ನಬಹುದು
Yella Items thumba chennaghidey.
ಧನ್ಯವಾದಗಳು