ಮಸೊಪ್ಪು (ಸೊಪ್ಪಿನ ಸಾರು)
ಬೇಕಾಗುವ ಸಾಮಗ್ರಿಗಳು:
ತೊಗರಿಬೇಳೆ 1ಕಪ್
ದಂಟಿನ ಸೊಪ್ಪು 1ಸಣ್ಣ ಕಟ್ಟು
ಕೀರೆ ಸೊಪ್ಪು 1ಸಣ್ಣ ಕಟ್ಟು
ಸಬ್ಸಿಗೆ ಸೊಪ್ಪು 1ಸಣ್ಣ ಕಟ್ಟು
ಮೆಂತ್ಯ ಸೊಪ್ಪು 1ಸಣ್ಣ ಕಟ್ಟು
ಹಸಿಮೆಣಸಿನಕಾಯಿ 12
ಬೆಳ್ಳುಳ್ಳಿ 1ಗಡ್ಡೆ
ಈರುಳ್ಳಿ 1
ಟೊಮೆಟೊ 1
ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ:
ಎಣ್ಣೆ 1ಚಮಚ
ಸಾಸಿವೆ 1/2 ಚಮಚ
ಕರಿಬೇವು ಸ್ವಲ್ಪ
ಒಣಮೆಣಸಿನ ಕಾಯಿ 2
ಬೆಳ್ಳುಳ್ಳಿ 5ಎಸಳು (ಜಜ್ಜಿದ್ದು)
ಮಾಡುವ ವಿಧಾನ:
ಸೊಪ್ಪುನ್ನು ಸ್ವಚ್ಛ ಮಾಡಿ ತೊಳೆದು ಇಡಿ.
ಕುಕ್ಕರ್ ಗೆ 2 ಕಪ್ ನೀರು, ತೊಗರಿಬೇಳೆ, ಸೊಪ್ಪು, ಹಸಿಮೆಣಸಿನಕಾಯಿ, ಟೊಮೆಟೊ, ಈರುಳ್ಳಿ, ಬೆಳ್ಳುಳ್ಳಿ ಹಾಕಿ 3 ವಿಷಲ್ ಕೂಗಿಸಿ. ತಣ್ಣಾಗಾದ ನಂತರ ನೀರು ಬಸಿದು ಮಸೆದು ಕೊಳ್ಳಿ ಅಥವಾ ಮಿಕ್ಸಿಗೆ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಮತ್ತು ನೀರು ಸೇರಿಸಿ ಕುದಿಸಿ. ಕೊನೆಯದಾಗಿ ಒಗ್ಗರಣೆ ಮಾಡಿದರೆ ಮಸೊಪ್ಪು ರೆಡಿ.
ಪಾಲಕ್ ಸೊಪ್ಪು, ಚಕೋತ ಸೊಪ್ಪು, ಹುಳಿ ಸೊಪ್ಪುನ್ನು ಬಳಸಬಹುದು.