ಹಾಗಲಕಾಯಿ ಗೊಜ್ಜು
ಬೇಕಾಗುವ ಸಾಮಗ್ರಿಗಳು:
ಹಾಗಲಕಾಯಿ 1/4ಕೆಜಿ
ಈರುಳ್ಳಿ 1
ಟೊಮೆಟೊ 2
ಹುಣಸೆ ರಸ 2ಚಮಚ
ಕರಿಬೇವು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ 2ಚಮಚ
ಬೆಲ್ಲ ಸ್ವಲ್ಪ
ಸಾಸಿವೆ 1/4 ಚಮಚ
ಕಡ್ಲೆಬೇಳೆ 1ಚಮಚ
ಕಾಯಿತುರಿ 2ಚಮಚ
ಅರಿಶಿನ ಸ್ವಲ್ಪ
ಸಾರಿನ ಪುಡಿ 1ಚಮಚ
ಮಾಡುವ ವಿಧಾನ:
ಹಾಗಲಕಾಯಿ, ಈರುಳ್ಳಿ, ಟೊಮೆಟೊ ಮತ್ತು ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಕೊಳ್ಳಿ. ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ ಹಾಕಿ ಸಿಡಿಸಿ ಕಡ್ಲೆಬೇಳೆ, ಕರಿಬೇವು, ಈರುಳ್ಳಿ, ಅರಿಶಿನ, ಟೊಮೆಟೊ ಹಾಕಿ ಮೆತ್ತಾಗಾಗುವರೆಗೂ ಹುರಿಯಿರಿ. ನಂತರ ಹಾಗಲಕಾಯಿ ಹಾಕಿ ಫ್ರೈ ಮಾಡಿ. ಹಾಗಲಕಾಯಿ ಬೆಂದ ಮೇಲೆ ಉಪ್ಪು, ಸಾರಿನ ಪುಡಿ, ಹುಣಸ ರಸ, ಬೆಲ್ಲ ಹಾಕಿ ಕುದಿಸಿ ಕೊನೆಯದಾಗಿ ಕೊತ್ತಂಬರಿ ಸೊಪ್ಪು, ಕಾಯಿ ತುರಿ ಸೇರಿಸಿ ಕೈಯಾಡಿಸಿದರೆ ರುಚಿಯಾದ ಗೊಜ್ಜು ರೆಡಿ.