ಗುಂಡುಕಾಯಿ ಫ್ರೈ
ಬೇಕಾಗುವ ಸಾಮಗ್ರಿಗಳು:
ಗುಂಡುಕಾಯಿ 1/2 ಕೆಜಿ
ಈರುಳ್ಳಿ 1
ಟೊಮೆಟೊ 1
ಕೊತ್ತಂಬರಿ ಸೊಪ್ಪು ಸ್ವಲ್ಪ
ಹಸಿಮೆಣಸಿನಕಾಯಿ 6-7
ಕಾಳುಮೆಣಸಿನ ಪುಡಿ 1/2ಚಮಚ
ಒಣಮೆಣಸಿನ ಕಾಯಿ ಪುಡಿ 1/2ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ 2ಚಮಚ
ಅರಿಶಿನ ಸ್ವಲ್ಪ
ಮಾಡುವ ವಿಧಾನ:
ಗುಂಡುಕಾಯಿಯನ್ನು ಹೆಚ್ಚಿ ತೊಳೆದಿಡಿ. ಈರುಳ್ಳಿ ಟೊಮೆಟೊ ಮತ್ತು ಹಸಿ ಮೆಣಸಿನಕಾಯಿಯನ್ನು ಸಣ್ಣಾದಾಗಿ ಹೆಚ್ಚಿ ಕೊಳ್ಳಿ
ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ, ಟೊಮೆಟೊ, ಹಸಿಮೆಣಸಿನಕಾಯಿ ಹಾಕಿ ಹುರಿಯಿರಿ. ನಂತರ ಇದಕ್ಕೆ ಗುಂಡುಕಾಯಿ ಉಪ್ಪು ಮತ್ತು ಅರಿಶಿನ ಹಾಕಿ ಬೇಯಲು ಇಡಿ. ಬೆಂದ ನಂತರ ಒಣಮೆಣಸಿನಕಾಯಿ ಪುಡಿ ಮತ್ತು ಕಾಳುಮೆಣಸಿನ ಪುಡಿ ಹಾಕಿ ಮಿಕ್ಸ್ ಮಾಡಿ 2ನಿಮಿಷ ಬೇಯಿಸಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪು ಸೇರಿಸಿ