ಮಟನ್ ಕೀಮಾ ಗೊಜ್ಜು
ಬೇಕಾಗುವ ಸಾಮಗ್ರಿಗಳು:
ಮಟನ್ ಕೀಮಾ 1/2 ಕೆಜಿ
ಈರುಳ್ಳಿ 1
ಟೊಮೆಟೊ 2
ಹಸಿಮೆಣಸಿನಕಾಯಿ 10 (ಖಾರಕ್ಕೆ ಬೇಕಾಗುವಷ್ಟು)
ಕೊತ್ತಂಬರಿ ಸೊಪ್ಪು 2ಹಿಡಿ
ಬೆಳ್ಳುಳ್ಳಿ
ಪುದೀನ 1ಕಟ್ಟು
ಚಕ್ಕೆ 1″
ಲವಂಗ 4
ಶುಂಠಿ 1″
ತೆಂಗಿನ ತುರಿ 1/2 ಕಪ್
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ 2-3 ಚಮಚ
ಹುರಿಗಡ್ಲೆ 2ಚಮಚ
ಅರಿಶಿನ ಸ್ವಲ್ಪ
ಮಾಡುವ ವಿಧಾನ:
ಈರುಳ್ಳಿ ಮತ್ತು 1 ಟೊಮೆಟೊ ಸಣ್ಣಗೆ ಹೆಚ್ಚಿಕೊಳ್ಳಿ. ಇನ್ನು ಉಳಿದ ಎಲ್ಲಾ ಸಾಮಗ್ರಿಗಳನ್ನು ನುಣ್ಣಗೆ ರುಬ್ಬಿಕೊಳ್ಳಿ. ಕುಕ್ಕರ್ ಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ ಟೊಮೆಟೊ ಹಾಕಿ ಫ್ರೈ ಮಾಡಿ. ಈಗ ಮಟನ್ ಕೀಮಾ ಮತ್ತು ಅರಿಶಿನ ಸೇರಿಸಿ ನೀರು ಇಂಗುವವರೆಗೂ ಹುರಿಯಿರಿ. ನಂತರ ರುಬ್ಬಿಕೊಂಡ ಮಸಾಲೆ ಮತ್ತು ಉಪ್ಪು ಹಾಕಿ ಫ್ರೈ ಮಾಡಿ 1/2 ಕಪ್ ನೀರು ಸೇರಿಸಿ 2 ವಿಷಲ್ ಕೂಗಿಸಿ.
ಗ್ರೇವಿ ಗಟ್ಟಿಯಾಗಿ ಇರಲಿ. ನೀರು ನೋಡಿ ಹಾಕಿಕೊಳ್ಳಿ.