ಮಸಾಲ ದೋಸೆ
ದೋಸೆ ಹಿಟ್ಟು
ಬೇಕಾಗುವ ಸಾಮಗ್ರಿಗಳು:
ಅಕ್ಕಿ 3 ಕಪ್
ಉದ್ದಿನಬೇಳೆ 1 ಕಪ್
ಕಡ್ಲೆಬೇಳೆ 1/4 ಕಪ್
ಮೆಂತ್ಯ 1ಚಮಚ
ಉಪ್ಪು
ಅಕ್ಕಿ ಮತ್ತು ಬೇಳೆಗಳನ್ನು ಬೇರೆ ಬೇರೆಯಾಗಿ 4 – 5 ಗಂಟೆ ನೆನಸಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ 8 ಗಂಟೆಗಳ ಕಾಲ ಹುದುಗಲು ಬಿಡಿ. ಬೆಳಗ್ಗೆ ಉಪ್ಪು ಸೇರಿಸಿ ಕಲಸಿ ಕೊಳ್ಳಿ.
ಕೆಂಪು ಚಟ್ನಿ
ಬೇಕಾಗುವ ಸಾಮಗ್ರಿಗಳು:
ಬ್ಯಾಡಗಿ ಮೆಣಸಿನಕಾಯಿ 15
ಬೆಳ್ಳುಳ್ಳಿ 1ಗಡ್ಡೆ
ಹುಣಸೆಹಣ್ಣು ಸ್ವಲ್ಪ
ಉಪ್ಪು
ಮಾಡುವ ವಿಧಾನ:
ಬ್ಯಾಡಗಿ ಮೆಣಸಿನಕಾಯಿಯನ್ನು 10- 15 ನಿಮಿಷ ಬಿಸಿ ನೀರಿನಲ್ಲಿ ನೆನಸಿಡಿ. ನಂತರ ನೀರು ಬಸಿದು ಬೆಳ್ಳುಳ್ಳಿ ಉಪ್ಪು ಮತ್ತು ಹುಣಸೆ ಹಣ್ಣು ಸೇರಿಸಿ ಗಟ್ಟಿಯಾಗಿ ರುಬ್ಬಿಕೊಳ್ಳಿ.
ಆಲೂಗೆಡ್ಡೆ ಪಲ್ಯ
ಬೇಕಾಗುವ ಸಾಮಗ್ರಿಗಳು:
ಆಲೂಗಡ್ಡೆ 1/2 ಕೆಜಿ
ಈರುಳ್ಳಿ 2
ಹಸಿಮೆಣಸಿನಕಾಯಿ 6
ಕಡ್ಲೆಬೇಳೆ 2ಚಮಚ
ಎಣ್ಣೆ 2ಚಮಚ
ಅರಿಶಿನ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು ಸ್ವಲ್ಪ
ಸಾಸಿವೆ 1/2ಚಮಚ
ಕರಿಬೇವು ಸ್ವಲ್ಪ
ಮಾಡುವ ವಿಧಾನ:
ಆಲೂಗೆಡ್ಡೆ ಯನ್ನು ಬೇಯಿಸಿ ಸಿಪ್ಪೆ ತೆಗೆದು ಪುಡಿ ಮಾಡಿಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ ಹಾಕಿ ಸಿಡಿಸಿ ನಂತರ ಕಡ್ಲೆಬೇಳೆ ಕರಿಬೇವು ಈರುಳ್ಳಿ ಹಸಿಮೆಣಸಿನಕಾಯಿ ಅರಿಶಿನ ಹಾಕಿ ಫ್ರೈ ಮಾಡಿ. ಈಗ ಪುಡಿ ಮಾಡಿದ ಆಲೂಗಡ್ಡೆ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿ.
ಮಸಾಲ ದೋಸೆ ಮಾಡುವ ವಿಧಾನ
ಮೊದಲಿಗೆ ತವಾಗೆ ತುಪ್ಪ ಅಥವಾ ಬೆಣ್ಣೆ ಹಾಕಿ ಬಿಸಿಯಾಗಲು ಬಿಡಿ. ತೆಳ್ಳಗೆ ದೋಸೆ ಹಾಕಿ ಮೇಲೆ ತುಪ್ಪ ಅಥವಾ ಬೆಣ್ಣೆ ಹಾಕಿ ಒಂದು ಕಡೆ ಬೇಯಿಸಿ. ಮೇಲೆ ಕೆಂಪು ಚಟ್ನಿ ಸವರಿ ಆಲೂಗೆಡ್ಡೆ ಪಲ್ಯ ಹಾಕಿ ಮಡಚಿ. ದೋಸೆಯ ಮೇಲೆ ಬೆಣ್ಣೆ ಇಟ್ಟು ಸರ್ವ್ ಮಾಡಿ.
Very good
ಧನ್ಯವಾದಗಳು