ಟೊಮೆಟೊ ಗೊಜ್ಜು
ಬೇಕಾಗುವ ಸಾಮಗ್ರಿಗಳು:
ಟೊಮೆಟೊ 5
ಈರುಳ್ಳಿ 2
ಒಣಮೆಣಸಿನ ಪುಡಿ 2ಚಮಚ (ಖಾರಕ್ಕೆ ಬೇಕಾಗುವಷ್ಟು)
ಎಣ್ಣೆ 5 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಸಕ್ಕರೆ 1/2 ಚಮಚ
ಸಾಸಿವೆ 1/2 ಚಮಚ
ಮಾಡುವ ವಿಧಾನ:
ಈರುಳ್ಳಿ ಮತ್ತು ಟೊಮೆಟೊ ವನ್ನು ಸಣ್ಣಗೆ ಹೆಚ್ಚಿಡಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ ಹಾಕಿ ಸಿಡಿಸಿ. ನಂತರ ಈರುಳ್ಳಿ ಹಾಕಿ ಮೆತ್ತಾಗಾಗುವರೆಗೂ ಹುರಿಯಿರಿ. ಈಗ ಟೊಮೆಟೊ ಉಪ್ಪು ಸೇರಿಸಿ ಮೆತ್ತಾಗಾಗುವರೆಗೂ ಬೇಯಿಸಿ. ಕೊನೆಯದಾಗಿ ಒಣಮೆಣಸಿನ ಪುಡಿ ಮತ್ತು ಸಕ್ಕರೆ ಸೇರಿಸಿ ಎಣ್ಣೆ ಬಿಡುವವರೆಗೂ ಬೇಯಿಸಿದರೆ ರುಚಿಯಾದ ಟೊಮೆಟೊ ಗೊಜ್ಜು ರೆಡಿ.
ನೀರು ಹಾಕಬಾರದು.
Tomato Gojju
Ingredients:
Tomato 5
Onion 2
Red Chilli Powder 2spoons (or as per taste)
Oil 5spoons
Salt (as per taste)
Sugar 1/2spoons
Mustard 1/2spoons
Procedure:
Chop tomato and onions into small pieces. Take a pan, add oil and mustard until it pops. Then, add onions and fry them until they turn soft. Add tomato & salt, and let it simmer for few minutes. Finally, add the red chilli powder & sugar and wait until the oil separates from the mixture. Tomato Gojju is now ready to serve.
Don’t add water.