ಪುಳಿಯೋಗರೆ
ಪುಡಿ ಮಾಡಲು ಬೇಕಾಗುವ ಸಾಮಗ್ರಿಗಳು:
ಧನಿಯ 2 ಸ್ಪೂನ್
ಬ್ಯಾಡಗಿ ಮೆಣಸಿನಕಾಯಿ 8 _ 10
ಕೆಂಪು ಮೆಣಸಿನಕಾಯಿ 8 – 10
ಜೀರಗೆ 1 ಸ್ಪೂನ್
ಮೆಣಸು 1/2 ಸ್ಪೂನ್
ಕರಿಬೇವು ಸ್ವಲ್ಪ
ಮೆಂತ್ಯ. 1/4 ಸ್ಪೂನ್
ಸಾಸಿವೆ 1/4 ಸ್ಪೂನ್
ಇಂಗು. ಸ್ವಲ್ಪ
ಎಲ್ಲಾ ಸಾಮಗ್ರಿಗಳನ್ನು ಹುರಿದು ಪುಡಿ ಮಾಡಿಕೊಳ್ಳಿ.
ಗೊಜ್ಜು ತಯಾರಿಸಲು ಬೇಕಾಗುವ ಸಾಮಗ್ರಿಗಳು:
ಹುಣಸೆಹಣ್ಣು 50 ಗ್ರಾಂ
ಉಪ್ಪು ರುಚಿಗೆ ತಕ್ಕಷ್ಟು
ಅರಿಶಿನ ಸ್ವಲ್ಪ
ಎಣ್ಣೆ 100 ಗ್ರಾಂ
ಕೊಬ್ಬರಿ ತುರಿ 1/2 ಕಪ್
ಹುರಿದ ಕಪ್ಪು/ಬಿಳಿ ಎಳ್ಳು 1/4 ಕಪ್
ಬೆಲ್ಲ ಸ್ವಲ್ಪ
ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು:
ಎಣ್ಣೆ. 3-4 ಸ್ಪೂನ್
ಸಾಸಿವೆ 1 ಸ್ಪೂನ್
ಕಡ್ಲೆಬೇಳೆ 1 ಸ್ಪೂನ್
ಉದ್ದಿನಬೇಳೆ 1 ಸ್ಪೂನ್
ಕಡ್ಲೆಕಾಯಿ ಬೀಜ 25 ಗ್ರಾಂ
ಕರಿಬೇವು ಸ್ವಲ್ಪ
ಒಣಮೆಣಸಿನ ಕಾಯಿಸು 3-4
ಇಂಗು ಸ್ವಲ್ಪ
ಗೊಜ್ಜು ತಯಾರಿಸುವ ವಿಧಾನ:
ಹುಣಸೆಹಣ್ಣುನ್ನು ನೀರಿನಲ್ಲಿ ನೆನಸಿ ಗಟ್ಟಿಯಾದ ರಸ ತೆಗೆದಿಡಿ. ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ ಹಾಕಿ ಸಿಡಿದ ಮೇಲೆ ಹುಣಸೆ ರಸವನ್ನು ಹಾಕಿ ಕುದಿಯಲು ಇಡಿ. ಇದಕ್ಕೆ ಉಪ್ಪು ಅರಿಶಿಣ ಮತ್ತು ಬೆಲ್ಲ ಸೇರಿಸಿ ಹಸಿವಾಸನೆ ಹೋಗುವರೆಗೂ ಕುದಿಸಿ. ನಂತರ ಪುಳಿಯೋಗರೆ ಪುಡಿ ಸೇರಿಸಿ ಚೆನ್ನಾಗಿ ಕೈಯಾಡಿಸಿ ಬಾಣಲೆ ಬಿಡುವವರೆಗೂ. ನಂತರ ಒಗ್ಗರಣೆ ಮಾಡಿ ಇದಕ್ಕೆ ಕೊಬ್ಬರಿ ತುರಿ ಮತ್ತು ಎಳ್ಳು ಸೇರಿಸಿ ಗೊಜ್ಜಿಗೆ ಹಾಕಿ ಮಿಕ್ಸ್ ಮಾಡಿ. ಉದುರಾದ ಅನ್ನ ಮಾಡಿ ಅಗತ್ಯವಿದ್ದಷ್ಟು ಗೊಜ್ಜು ಸೇರಿಸಿ ಕಲಸಿದರೆ ರುಚಿಯಾದ ಪುಳಿಯೋಗರೆ ರೆಡಿ.