ಅಕ್ಕಿ ರೊಟ್ಟಿ
ಬೇಕಾಗುವ ಸಾಮಗ್ರಿಗಳು:
ಅಕ್ಕಿ ಹಿಟ್ಟು 1 ಕಪ್
ಉಪ್ಪು ಸ್ವಲ್ಪ
ನೀರು
ಮಾಡುವ ವಿಧಾನ:
ಅಕ್ಕಿ ಹಿಟ್ಟಿಗೆ ಉಪ್ಪು ಮತ್ತು ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿ ಸ್ವಲ್ಪ ಹೊತ್ತು ನೆನೆಯಲು ಬಿಡಿ. ನಂತರ ಕಾದ ತವಾ ಮೇಲೆ ಒಂದು ಸೌಟಿನಷ್ಟು ಹಿಟ್ಟು ಹಾಕಿ ಕೈಯಿಂದ ತವಾ ಪೂರ್ತಿ ಬಳಿಯಿರಿ. ಮುಚ್ಚಳ ಮುಚ್ಚಿ ಎರಡು ಕಡೆ ಬೇಯಿಸಿ.
ಚನ್ನ ಮಸಾಲ
ಬೇಕಾಗುವ ಸಾಮಗ್ರಿಗಳು:
ಕಾಬುಲ್ ಕಡಲೆ 100 ಗ್ರಾಂ
ಈರುಳ್ಳಿ ಸಣ್ಣಗೆ ಹೆಚ್ಚಿದ್ದು 2
ಟೊಮೆಟೊ ಸಣ್ಣಗೆ ಹೆಚ್ಚಿದ್ದು 2
ಕೊತ್ತಂಬರಿ ಸೊಪ್ಪು ಸ್ವಲ್ಪ
ಹಸಿಮೆಣಸಿನಕಾಯಿ 2ಸೀಳಿದ್ದು
ಧನಿಯ ಪುಡಿ 1ಚಮಚ
ಒಣಮೆಣಸಿನ ಕಾಯಿ ಪುಡಿ 1 ಚಮಚ
ಗರಂ ಮಸಾಲ 1ಚಮಚ
ಅರಿಶಿನ 1/2 ಚಮಚ
ಎಣ್ಣೆ 2ಚಮಚ
ಉಪ್ಪು
ಮಾಡುವ ವಿಧಾನ:
ಕಡಲೆ ಯನ್ನು 8ಗಂಟೆ ನೆನಸಿ ಕುಕ್ಕರ್ ನಲ್ಲಿ ಬೇಯಿಸಿ ಕೊಳ್ಳಿ.
ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ ಟೊಮೆಟೊ ಹಾಕಿ ಮೆತ್ತಾಗಾಗುವರೆಗೂ ಬೇಯಿಸಿ. ನಂತರ ಹಸಿಮೆಣಸಿನಕಾಯಿ ಧನಿಯ ಪುಡಿ ಒಣಮೆಣಸಿನ ಕಾಯಿ ಪುಡಿ ಗರಂ ಮಸಾಲ ಪುಡಿ ಅರಿಶಿನ ಸೇರಿಸಿ ಚೆನ್ನಾಗಿ ಹುರಿಯಿರಿ. ನಂತರ ಬೇಯಿಸಿದ ಕಡಲೆ ಉಪ್ಪು ನೀರು ಅರ್ಧ ಗ್ಲಾಸ್ ಸೇರಿಸಿ ಹದವಾಗಿ ಬೇಯಿಸಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪು ಸೇರಿಸಿ ಕೈಯಾಡಿಸಿ.