ವೆಜ್ ಪಲಾವ್ | Veg Palav recipe in Kannada

By

ವೆಜ್ ಪಲಾವ್

ಬೇಕಾಗುವ ಸಾಮಗ್ರಿಗಳು:
ಅಕ್ಕಿ 2ಕಪ್
ಮಿಶ್ರ ತರಕಾರಿ 2ಕಪ್
ಹಸಿಮೆಣಸಿನಕಾಯಿ 12
ಶುಂಠಿ 2″
ಬೆಳ್ಳುಳ್ಳಿ 15 ಎಸಳು
ಪುದೀನ 1ಕಪ್
ಕೊತ್ತಂಬರಿ ಸೊಪ್ಪು ಸ್ವಲ್ಪ
ಚಕ್ಕೆ 1″
ಲವಂಗ 4
ಏಲಕ್ಕಿ 2
ಬಿರಿಯಾನಿ ಎಲೆ 2
ಮೊರಾಠ ಮೊಗ್ಗು 2
ಈರುಳ್ಳಿ 2
ಟೊಮೆಟೊ 2
ತುಪ್ಪ 1ಚಮಚ
ಎಣ್ಣೆ 2ಚಮಚ
ಅರಿಶಿನ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
ತರಕಾರಿಗಳನ್ನು ಹೆಚ್ಚಿಕೊಳ್ಳಿ. ಶುಂಠಿ ಬೆಳ್ಳುಳ್ಳಿ ಹಸಿಮೆಣಸಿನಕಾಯಿ ಸ್ವಲ್ಪ ಪುದೀನ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ.

ಕುಕ್ಕರ್ ಗೆ ಎಣ್ಣೆ ಮತ್ತು ತುಪ್ಪ ಹಾಕಿ ಬಿಸಿಯಾದ ಮೇಲೆ ಚಕ್ಕೆ ಲವಂಗ ಏಲಕ್ಕಿ ಬಿರಿಯಾನಿ ಎಲೆ ಮೊರಾಠ ಮೊಗ್ಗು ಹಾಕಿ ಹುರಿಯಿರಿ ನಂತರ ಈರುಳ್ಳಿ ಟೊಮೆಟೊ ಶುಂಠಿ ಬೆಳ್ಳುಳ್ಳಿ ಹಸಿಮೆಣಸಿನಕಾಯಿ ಪೇಸ್ಟ್ ಹಾಕಿ ಹಸಿವಾಸನೆ ಹೋಗುವರೆಗೂ ಹುರಿಯಿರಿ. ಈಗ ತರಕಾರಿ, ಉಪ್ಪು ಮತ್ತು ಅರಿಶಿನ ಸೇರಿಸಿ ಬಾಡಿಸಿ ನೀರು ಸೇರಿಸಿ ಕುದಿಯಲು ಬಿಡಿ. ನೀರು ಕುದಿ ಬಂದಮೇಲೆ ಅಕ್ಕಿ ಪುದೀನ ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿ ಮುಚ್ಚಲ ಮುಚ್ಚಿ ಒಂದು ಕೂಗಿಸಿ. ಕುಕ್ಕರ್ ತಣ್ಣಾಗಾದ ಮೇಲೆ ತೆಗೆದು ಮೊಸರು ಬಜ್ಜಿ /ರಾಯತ ಜೊತೆ ಬಡಿಸಿ.

ತರಕಾರಿಗಳನ್ನು ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಹಾಕಿ. ನಾನು ಬಟಾಣಿ, ಹುರುಳಿ ಕಾಯಿ, ಆಲೂಗಡ್ಡೆ, ಕ್ಯಾರಟ್, ಗೆಡ್ಡೆಕೋಸು ಬಳಸಿ ಮಾಡಿದ್ದೇನೆ.

ವೆಜ್ ಪಲಾವ್ | Veg Palav

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz