ಅವರೆಕಾಳು ಅಕ್ಕಿ ರೊಟ್ಟಿ
ಬೇಕಾಗುವ ಸಾಮಗ್ರಿಗಳು:
ಅಕ್ಕಿ ಹಿಟ್ಟು 1 ಕಪ್
ಗೆಡ್ಡೆಕೋಸು ತುರಿದಿದ್ದು 1ಕಪ್
ಎಳೆ ಅವರೆಕಾಳು 1ಕಪ್
ಜೀರಿಗೆ 1ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಕರಿಬೇವು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಕಾಯಿತುರಿ 2ಚಮಚ
ಎಣ್ಣೆ 2-3 ಚಮಚ
ಹಸಿಮೆಣಸಿನಕಾಯಿ 4
ನೀರು
ಮಾಡುವ ವಿಧಾನ:
ಅವರೆಕಾಳನ್ನು ಸ್ವಲ್ಪ ಉಪ್ಪು ಸೇರಿಸಿ ಬೇಯಿಸಿ ಕೊಳ್ಳಿ. ಕೊತ್ತಂಬರಿ ಸೊಪ್ಪು, ಕರಿಬೇವು, ಹಸಿಮೆಣಸಿನಕಾಯಿ ಯನ್ನು ಸಣ್ಣಾದಾಗಿ ಹೆಚ್ಚಿ ಕೊಳ್ಳಿ.
ಎಣ್ಣೆ ಹಾಗೂ ನೀರನ್ನು ಬಿಟ್ಟು, ಉಳಿದ ಎಲ್ಲಾ ಸಾಮಗ್ರಿಗಳನ್ನು ಒಂದು ಬೌಲನಲ್ಲಿ ಹಾಕಿ ಚೆನ್ನಾಗಿ ಬೆರೆಸಿ, ಈಗ ಸ್ವಲ್ಪ ಸ್ವಲ್ಪ ನೀರು ಸೇರಿಸಿ ಮೃದುವಾಗಿ ಕಲಸಿ ಸಣ್ಣ ಸಣ್ಣ ಉಂಡೆ ಕೊಳ್ಳಿ. ಎಣ್ಣೆ ಸವರಿದ ಬಾಳೆಎಲೆ ಅಥವಾ ಬಟರ್ ಪೇಪರ್ ಮೇಲೆ ತೆಳುವಾಗಿ ತಟ್ಟಿ, ಕಾದ ತವಾ ಮೇಲೆ ಎಣ್ಣೆ ಹಾಕಿ ಬೇಯಿಸಿದರೆ ರುಚಿಯಾದ ಅವರೆಕಾಳು ಅಕ್ಕಿ ರೊಟ್ಟಿ ರೆಡಿ.
ಇದನ್ನು ತುಪ್ಪ, ಚಟ್ನಿ, ಉಪ್ಪಿನಕಾಯಿ, ತೊಕ್ಕು, ಎಣ್ಣೆಗಾಯಿ ಯಾವುದರ ಜೊತೆಯು ತಿನ್ನಬಹುದು.