ನೆಲ್ಲಿಕಾಯಿ ತೊಕ್ಕು
ಬೇಕಾಗುವ ಸಾಮಗ್ರಿಗಳು:
ನೆಲ್ಲಿಕಾಯಿ 1ಕಪ್ (ತುರಿದಿದ್ದು)
ಉಪ್ಪು ರುಚಿಗೆ ತಕ್ಕಷ್ಟು
ಹಸಿಮೆಣಸಿನಕಾಯಿ 10
ಅರಿಶಿನ ಸ್ವಲ್ಪ
ಮೆಂತ್ಯ ಪುಡಿ 1ಚಮಚ (ಹುರಿದು ಪುಡಿ ಮಾಡಿದ್ದು)
ಒಗ್ಗರಣೆಗೆ:
ಎಣ್ಣೆ 1ಚಮಚ
ಸಾಸಿವೆ 1/2ಚಮಚ
ಇಂಗು ಸ್ವಲ್ಪ
ಮಾಡುವ ವಿಧಾನ:
ನೆಲ್ಲಿಕಾಯಿ, ಉಪ್ಪು, ಅರಿಶಿನ, ಮೆಂತ್ಯ ಪುಡಿ ಮತ್ತು ಹಸಿಮೆಣಸಿನಕಾಯಿ ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ. ನಂತರ ಗಾಜಿನ ಬಾಟಲಿ ನಲ್ಲಿ ಹಾಕಿಡಿ. ಬೇಕಾದಾಗ ಸ್ವಲ್ಪ ತೆಗೆದು ಒಗ್ಗರಣೆ ಮಾಡಿಕೊಳ್ಳಿ.
ನೆಲ್ಲಿಕಾಯಿ ಮತ್ತು ಮೆಣಸಿನಕಾಯಿಗಳನ್ನು ತೊಳೆದು ಒಣಗಿಸಿ ಉಪಯೋಗಿಸಿ. ನೀರಿನಂಶ ಇರಬಾರದು. ಮಿಕ್ಸಿ ಜಾರ್ ಒಣಗಿರಬೇಕು.