ಉಪ್ಸಾರು | Simple Upsaaru recipe in Kannada & English

By

ಉಪ್ಸಾರು

ಬೇಕಾಗುವ ಸಾಮಗ್ರಿಗಳು:
ತೊಗರಿಬೇಳೆ 1ಕಪ್
ಹುರುಳಿಕಾಯಿ 100 ಗ್ರಾಂ
ಸಬ್ಸಿಗೆ ಸೊಪ್ಪು 1 ದಪ್ಪ ಕಟ್ಟು
ಉಪ್ಪು
ನೀರು 1 ಲೀಟರ್

(* ತೊಗರಿಬೇಳೆ, ಅಲಸಂದೆ ಕಾಳು, ಹೆಸರು ಕಾಳು, ಹುರುಳಿ ಕಾಳು, ಅವರೆ ಕಾಳು ಇದರಲ್ಲಿ ಯಾವುದಾದರೂ ಉಪಯೋಗಿಸಬಹುದು.)

ಮಾಡುವ ವಿಧಾನ:
ತೊಗರಿಬೇಳೆ ಬೇಯಲು ಇಡಿ. ಅರ್ಧ ಬೆಂದ ನಂತರ ಅದಕ್ಕೆ ಹುರುಳಿಕಾಯಿ ಮತ್ತು ಸೊಪ್ಪು ( ಅರಿವೆ, ದಂಟು,ನುಗ್ಗೆ, ಸಬ್ಸಿಗೆ ಮತ್ತು ಕೀರೆ ಸೊಪ್ಪು ಎಲ್ಲಾ ಮಿಶ್ರ ಮಾಡಿ ಹಾಕಬಹುದು. ನಿಮಗೆ ಇಷ್ಟವಾದ ಒಂದು ಸೊಪ್ಪುನ್ನು ಉಪಯೋಗಿಸಬಹುದು) ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬೇಯಿಸಿ. ನಂತರ ಸೊಪ್ಪು ಬೇಳೆಯನ್ನು ಬಸಿದು ಬೇಯಿಸಿದ ನೀರನ್ನು ತೆಗೆದು ಇಡಿ.

ಖಾರಕ್ಕೆ ಬೇಕಾಗುವ ಸಾಮಗ್ರಿಗಳು:
ಮಣ್ಣು ಕಟ್ಟಿದ ಮೆಣಸಿನಕಾಯಿ 8 -10
ಜೀರಿಗೆ 1ಚಮಚ
ಕಾಳು ಮೆಣಸು 1/2 ಚಮಚ
ಹುಣಸೆಹಣ್ಣು ಸ್ವಲ್ಪ
ಉಪ್ಪು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಬೆಳ್ಳುಳ್ಳಿ 10 ಎಸಳು

ಮಾಡುವ ವಿಧಾನ:
ಹುರಿದ ಒಣಮೆಣಸಿನ ಕಾಯಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಜೀರಿಗೆ, ಮೆಣಸು, ಉಪ್ಪು, ಸ್ವಲ್ಪ ಹುಣಸೆ ಹಣ್ಣು ಮತ್ತು ಬೇಯಿಸಿದ ಸ್ವಲ್ಪ ಬೇಳೆ ಸೇರಿಸಿ ರುಬ್ಬಿಕೊಳ್ಳಿ. ಗಟ್ಟಿಯಾಗಿ ಇರಬೇಕು ನೀರು ಬೇಕೆನಿಸಿದರೆ ಬೇಳೆ ಬೇಯಿಸಿದ ನೀರನ್ನು ಬಳಸಿ. ಹಸಿ ಅವರೆಕಾಳು, ಹಸಿ ತೊಗರಿ ಕಾಳು ಬಳಸಿದರೆ ಒಣಮೆಣಸಿನ ಕಾಯಿ ಬದಲು ಹಸಿಮೆಣಸಿನಕಾಯಿ ಬೇಯಿಸಿ ರುಬ್ಬಿಕೊಳ್ಳಿ.

ಸೊಪ್ಪಿನ ಪಲ್ಯ ಒಗ್ಗರಣೆ:
ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ, ಜಜ್ಜಿದ ಬೆಳ್ಳುಳ್ಳಿ, ಕರಿಬೇವು, ಒಣಮೆಣಸಿನಕಾಯಿ ಹಾಕಿ ಫ್ರೈ ಮಾಡಿ ಬೇಯಿಸಿದ ಬೇಳೆ ಮತ್ತು ಸೊಪ್ಪು ಸೇರಿಸಿ ಕೈಯಾಡಿಸಿ. ಕೊನೆಯದಾಗಿ ತೆಂಗಿನ ತುರಿ ಸ್ವಲ್ಪ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿ.

 

Upsaaru

Ingredients for Upsaaru:
Toor Dal – 1 cup
Horse Gram – 100g
Dill leaves – 1 bunch
Water – 1 litre
Salt

*Any lentil (Toor Dal, Urad Dal, Horse gram, Green gram) can be used.

Procedure:
Boil the Toor Dal. Once it reaches half boiled stage, add Horse gram and green leafy vegetables of your choice or you can just add the dill leaves. Add Salt (according to your taste) and let it boil. Once it is well boiled, strain the water and keep it separately.

Ingredients for Khara:
Chillies – 8 – 10
Cumin – 1 spoon
Pepper – ½ spoon
Coriander leaves
Garlic – 10 cloves
Tamarind
Salt

Procedure:
Add Roasted red chilli, garlic, coriander leaves, cumin, pepper, salt, a little bit of tamarind and a portion of boiled Dal to mixie jar and grind it. Add the boiled water if you want it to stay as a thick paste.

( Use green chilli when fresh beans are used)

Soppu Palya Procedure:
Heat oil in a pan, add mustard seeds, chopped garlic, curry leaves, chilli powder, boiled Dal & green leafy vegetables/ dill leaves. Mix well. Top it off with grated coconut and coriander leaves. Soppu palya is ready to serve for your loved ones! 🙂

 

up-1

You may also like

www.bugunmersin.com - www.eskisehirescort.asia - tesettür -

food subscription box

- baskı beton - test çöz