ಮಟನ್ ಕೀಮಾ ಸಾರು
ಬೇಕಾಗುವ ಸಾಮಗ್ರಿಗಳು:
ಮಟನ್ ಕೀಮಾ 1/2 ಕೆಜಿ
ಈರುಳ್ಳಿ 1
ಬೆಳ್ಳುಳ್ಳಿ 15 ಎಸಳು
ಕೊತ್ತಂಬರಿ ಸೊಪ್ಪು ಸ್ವಲ್ಪ
ಅರಿಶಿನ
ಕಾಳು ಮೆಣಸು 1/2 ಚಮಚ
ತೆಂಗಿನ ತುರಿ 1/2 ಕಪ್
ಚಕ್ಕೆ 1″
ಲವಂಗ 3
ಶುಂಠಿ 1″
ಟೊಮೆಟೊ 1
ಹುರಿಗಡ್ಲೆ 1ಚಮಚ
ಧನಿಯ ಪುಡಿ 2 ಚಮಚ
ಒಣಮೆಣಸಿನ ಕಾಯಿ ಪುಡಿ 2ಚಮಚ (ಖಾರಕ್ಕೆ ಬೇಕಾಗುವಷ್ಟು)
ಉಪ್ಪು ರುಚಿಗೆ ತಕ್ಕಷ್ಟು
ಕೀಮಾ ಉಂಡೆಗೆ ಬೇಕಾಗುವ ಸಾಮಗ್ರಿಗಳು:
ಈರುಳ್ಳಿ 1
ಬೆಳ್ಳುಳ್ಳಿ 10 ಎಸಳು
ಕೊತ್ತಂಬರಿ ಸೊಪ್ಪು ಸ್ವಲ್ಪ
ಕಾಯಿತುರಿ 2ಚಮಚ
ಶುಂಠಿ 1/2″
ಚಕ್ಕೆ 1″
ಲವಂಗ 2
ಹುರಿಗಡ್ಲೆ ಪುಡಿ 2ಚಮಚ
ಪುದೀನ ಒಂದು ಹಿಡಿ ಯಷ್ಟು
ಮೊಟ್ಟೆ 1
ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಈರುಳ್ಳಿ, ಬೆಳ್ಳುಳ್ಳಿ, ಅರಿಶಿನ, ಕಾಳುಮೆಣಸು ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ ನೀರು ಹಾಕದೆ ರುಬ್ಬಿಕೊಳ್ಳಿ. ತೆಂಗಿನ ಕಾಯಿ, ಶುಂಠಿ, ಚಕ್ಕೆ, ಲವಂಗ, ಟೊಮೆಟೊ ಸ್ವಲ್ಪ ಹುರಿಗಡ್ಲೆ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ದನಿಯಾ ಪುಡಿ ಮತ್ತು ಒಣಮೆಣಸಿನ ಕಾಯಿ ಪುಡಿ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ.
ಕೀಮಾ ಉಂಡೆ ತಯಾರಿಸಲು ಈರುಳ್ಳಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಕಾಯಿ ತುರಿ, ಶುಂಠಿ, ಚಕ್ಕೆ, ಲವಂಗ, ಹಸಿಮೆಣಸಿನಕಾಯಿ, ಪುದೀನ ಸೇರಿಸಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ಒಂದು ಅಗಲವಾದ ಪಾತ್ರೆಗೆ ಕೀಮಾ, ರುಬ್ಬಿದ ಮಸಾಲೆ, ಉಪ್ಪು, ಒಂದು ಮೊಟ್ಟೆ, ಹುರಿಗಡ್ಲೆ ಪುಡಿ ಸೇರಿಸಿ ಮಿಕ್ಸ್ ಮಾಡಿ ಸಣ್ಣ ಸಣ್ಣ ಉಂಡೆ ಮಾಡಿಕೊಳ್ಳಿ.
ಕುಕ್ಕರ್ ಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ ಮಿಶ್ರಣ ಹಾಕಿ ನಂತರ ( ನಲ್ಲಿ ಮೂಳೆ ಗಳು ಇದ್ದರೆ ಹಾಕಿ ಫ್ರೈ ಮಾಡಿ) ದನಿಯಾ ಪುಡಿ ಮಿಶ್ರಣ ಮತ್ತು ತೆಂಗಿನ ಕಾಯಿ ಮಸಾಲೆ ಮತ್ತು ಅಗತ್ಯವಿದ್ದಷ್ಟು ನೀರು ಹಾಕಿ ಕುದಿಸಿ. ಚೆನ್ನಾಗಿ ಕುದಿ ಬಂದಮೇಲೆ ಕೀಮಾ ಉಂಡೆ ಗಳನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ 2 ವಿಷಲ್ ಕೂಗಿಸಿ. ಗಟ್ಟಿಯಾದ ಗ್ರೇವಿ ಬೇಕಾದರೆ ನೀರು ಕಡಿಮೆ ಹಾಕಿ.