ಹೀರೆಕಾಯಿ ಪಪ್ಪು
ಬೇಕಾಗುವ ಸಾಮಗ್ರಿಗಳು:
ತೊಗರಿಬೇಳೆ 1ಕಪ್
ಹೀರೆಕಾಯಿ 1/4 ಕೆಜಿ
ಈರುಳ್ಳಿ 1
ಬೆಳ್ಳುಳ್ಳಿ 15 ಎಸಳು
ಟೊಮೆಟೊ 1
ಹಸಿಮೆಣಸಿನಕಾಯಿ 10
ಅರಿಶಿನ
ಉಪ್ಪು
ಒಗ್ಗರಣೆಗೆ:
ಎಣ್ಣೆ
ಸಾಸಿವೆ
ಒಣಮೆಣಸಿನ ಕಾಯಿ
ಕರಿಬೇವು ಇಂಗು
ಮಾಡುವ ವಿಧಾನ:
ತೊಗರಿಬೇಳೆ, ಹೀರೆಕಾಯಿ, ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ಹಾಗೂ ಟೊಮೆಟೊ ಇಷ್ಟನ್ನು ಕುಕ್ಕರ್ ನಲ್ಲಿ ಬೇಯಿಸಿ. ತಣ್ಣಾಗಾದ ನಂತರ ನೀರು ಬಸಿದು, ತೊಗರಿಬೇಳೆ ಬಿಟ್ಟು ಉಳಿದದ್ದನ್ನು ತೆಗೆದು ಮಿಕ್ಸಿಗೆ ಹಾಕಿ. ತರಿ ತರಿ ಇರಬೇಕು ನುಣ್ಣಗೆ ಬೇಡ. ಈ ಮಿಶ್ರಣಕ್ಕೆ ಬೇಳೆ ಮತ್ತು ಬಸಿದ ನೀರು, ಉಪ್ಪು ಮತ್ತು ಅರಿಶಿನ ಸೇರಿಸಿ ಕುದಿಸಿ. ಇದು ಗಟ್ಟಿಯಾಗಿ ಇರಬೇಕು. ನಂತರ ಒಗ್ಗರಣೆ ಮಾಡಿ.
ಚಿಕನ್ ಕಬಾಬ್
ಬೇಕಾಗುವ ಸಾಮಗ್ರಿಗಳು:
ಕೋಳಿ ಮಾಂಸ 1/2 ಕೆಜಿ
ಕಾರ್ನ್ ಫ್ಲೊರ್ 4ಚಮಚ
ಮೈದಾ 2ಚಮಚ
ಉಪ್ಪು
ಒಣಮೆಣಸಿನ ಕಾಯಿ ಪುಡಿ 1ಚಮಚ
ಮೊಟ್ಟೆ 1
ಬೆಳ್ಳುಳ್ಳಿ 10ಗ್ರಾಂ
ಶುಂಠಿ 10 ಗ್ರಾಂ
ಹಸಿಮೆಣಸಿನಕಾಯಿ 4
ಮಾಡುವ ವಿಧಾನ:
ಶುಂಠಿ ಬೆಳ್ಳುಳ್ಳಿ ಹಸಿಮೆಣಸಿನಕಾಯಿ ಪೇಸ್ಟ್ ಮಾಡಿಕೊಳ್ಳಿ. ಕಾರ್ನ್ ಫ್ಲೊರ್, ಮೈದಾ, ಉಪ್ಪು, ಒಣಮೆಣಸಿನಕಾಯಿ ಪುಡಿ, ಬೆಳ್ಳುಳ್ಳಿ ಪೇಸ್ಟ್ ಮತ್ತು ಮೊಟ್ಟೆ ಸೇರಿಸಿ ಮಿಕ್ಸ್ ಮಾಡಿ.( ನೀರು ಹಾಕಬಾರದು) ಕೋಳಿ ತುಂಡು ಗಳನ್ನು ಸೇರಿಸಿ ಕಲಸಿ ಅರ್ಧ ಗಂಟೆ ನೆನೆಯಲು ಬಿಡಿ. ನಂತರ ಕಾದ ಎಣ್ಣೆಯಲ್ಲಿ ಕೆಂಪಗೆ ಕರಿಯಿರಿ.