ಬಿಸಿಬೇಳೆ ಬಾತ್
ಬೇಕಾಗುವ ಸಾಮಗ್ರಿಗಳು:
ತೊಗರಿಬೇಳೆ 1ಕಪ್
ಅಕ್ಕಿ 1ಕಪ್
ಹುಣಸೆಹಣ್ಣು ನಿಂಬೆ ಗಾತ್ರ
ಮಿಶ್ರ ತರಕಾರಿಗಳು 1ಕಪ್
ಎಣ್ಣೆ 2 ಚಮಚ
ಸಾಸಿವೆ 1/2 ಚಮಚ
ಕರಿಬೇವು ಸ್ವಲ್ಪ
ತೆಂಗಿನ ತುರಿ 1/4 ಕಪ್
ಕೊಬ್ಬರಿ ತುರಿ ಸ್ವಲ್ಪ
ಪುಡಿಗೆ ಬೇಕಾಗುವ ಸಾಮಗ್ರಿಗಳು:
ಕಡ್ಲೆಬೇಳೆ 1 ಚಮಚ
ಉದ್ದಿನಬೇಳೆ 1 ಚಮಚ
ಬ್ಯಾಡಗಿ ಮೆಣಸಿನಕಾಯಿ 7_8
ಕೆಂಪು ಮೆಣಸಿನಕಾಯಿ 7-8
ಚಕ್ಕೆ 1″
ಲವಂಗ 2-3
ಏಲಕ್ಕಿ 2
ಮೊರಾಠ ಮೊಗ್ಗು 1
ಧನಿಯ 2 ಚಮಚ
ಎಲ್ಲಾ ಸಾಮಗ್ರಿಗಳನ್ನು ಹುರಿದು ಪುಡಿ ಮಾಡಿ ತೆಂಗಿನ ತುರಿ ಮತ್ತು ಹುಣಸೆಹಣ್ಣು ಸೇರಿಸಿ ರುಬ್ಬಿಕೊಳ್ಳಿ.
ತೊಗರಿಬೇಳೆ ಯನ್ನು ಅರಿಶಿನ ಸೇರಿಸಿ ಬೇಯಿಸಿ ಕೊಳ್ಳಿ.
ಕುಕ್ಕರ್ ಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ ಕರಿಬೇವು ಒಣಮೆಣಸಿನ ಕಾಯಿ ತರಕಾರಿಗಳನ್ನು ಸೇರಿಸಿ ಬಾಡಿಸಿ. ನಂತರ ಇದಕ್ಕೆ ಬಿಸಿ ನೀರು ಅಕ್ಕಿ ಉಪ್ಪು ರುಬ್ಬಿದ ಮಿಶ್ರಣ ಸೇರಿಸಿ ಕುದಿಯಲು ಬಿಡಿ. ಕುದಿ ಬಂದಮೇಲೆ ಬೇಯಿಸಿದ ತೊಗರಿಬೇಳೆ ಕೊಬ್ಬರಿ ತುರಿ ಸೇರಿಸಿ 2ವಿಷಲ್ ಕೂಗಿಸಿ. ಕುಕ್ಕರ್ ತಣ್ಣಾಗಾದ ಮೇಲೆ ತೆಗೆದು ಕೊತ್ತಂಬರಿ ಸೊಪ್ಪು ಮತ್ತು ತುಪ್ಪ ಸೇರಿಸಿ ಬಡಿಸಿ.
ಇದು ಸ್ವಲ್ಪ ತೆಳುವಾಗಿ ಇರಬೇಕು. ತಣ್ಣಾಗಾದ ನಂತರ ಗಟ್ಟಿಯಾಗುತ್ತದೆ.
Don’t we have to fry the kadale bele, uddinabele…. etc ?
ಪುಡಿ ಮಾಡುವ ಎಲ್ಲಾ ಪದಾರ್ಥಗಳನ್ನು ಹುರಿದು ಪುಡಿ ಮಾಡಿ.